ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರ 15 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (IED) ಪೊಲೀಸರು ನಿಷ್ಕ್ರಿಯಗೊಳಿಸಿದ್ದು, ದೊಡ್ಡ ಭಯೋತ್ಪಾದಕ ದಾಳಿ ತಪ್ಪಿಸಲಾಗಿದೆ. ಸಿಲಿಂಡರಾಕಾರದ ಐಇಡಿ ಆರ್ಡಿಎಕ್ಸ್ ಅನ್ನು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗಾಗಿ ಶಂಕಿತನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಇಡಿ ಹೊರತುಪಡಿಸಿ, ಬಸಂತ್ಗಢ ಪ್ರದೇಶದಲ್ಲಿ ಏಳು 7.62 ಎಂಎಂ ಕಾರ್ಟ್ರಿಡ್ಜ್ಗಳು ಮತ್ತು ಐದು ಡಿಟೋನೇಟರ್ಗಳನ್ನ ಸಹ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸ್ಫೋಟಕ ಮತ್ತು ಮದ್ದುಗುಂಡುಗಳನ್ನ ಅಡಗಿಸಿಟ್ಟಿದೆ ಎಂದು ನಂಬಲಾಗಿದೆ. ಲಷ್ಕರೆ ತಯ್ಬಾದ ಕೋಡೆಡ್ ಶೀಟ್ ಮತ್ತು ಲೆಟರ್ಪ್ಯಾಡ್ ಪುಟವನ್ನ ಸಹ ವಶಪಡಿಸಿಕೊಳ್ಳಲಾಗಿದೆ.
BREAKING NEWS : ಅಕ್ರಮ ವೋಟರ್ ಐಡಿ ಕೇಸ್ : ‘ಚಿಲುಮೆ’ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ‘ಬಿಬಿಎಂಪಿ’ ಆದೇಶ