ಉಧಂಪುರ : ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಪೊಲೀಸರು 15 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (IED)ನಿಷ್ಕ್ರಿಯಗೊಳಿಸಿದ್ದು, ದೊಡ್ಡ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದ್ದಾರೆ. ಸಿಲಿಂಡರಾಕಾರದ ಐಇಡಿಯಲ್ಲಿ ಆರ್ಡಿಎಕ್ಸ್ (RDX) ಇತ್ತು ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಇಡಿ ಅಲ್ಲದೆ, ಬಸಂತ್ಗಢ ಪ್ರದೇಶದಲ್ಲಿ ಏಳು 7.62 ಎಂಎಂ ಕಾರ್ಟ್ರಿಡ್ಜ್ಗಳು ಮತ್ತು ಐದು ಡಿಟೋನೇಟರ್ ಹಾಗೂ ಒಂದು ಕೋಡೆಡ್ ಶೀಟ್ ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ನ ಲೆಟರ್ಪ್ಯಾಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸ್ಫೋಟಕ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿತ್ತು ಎಂದು ಶಂಕಿಸಲಾಗಿದೆ.
ಭದ್ರತಾ ಪಡೆಗಳು ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಕಾಶ್ಮೀರದಲ್ಲಿ ಸಕ್ರಿಯ ಉಗ್ರರ ಸಂಖ್ಯೆಯನ್ನು ಮತ್ತಷ್ಟು ಮಟ್ಟ ಹಾಕುವ ಗುರಿಯನ್ನು ಹೊಂದಿದ್ದು, ಪಡೆಗಳು ಅದರಲ್ಲಿ ಯಶಸ್ವಿಯಾಗಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಕಣಿವೆಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯ ಆಚೆಯಿಂದ ಉಗ್ರಗಾಮಿಗಳನ್ನು ಕಳುಹಿಸುತ್ತಿದೆ.ನಾಗರಿಕರನ್ನು ಗುರಿಯಾಗಿಸಲು ಪಾಕಿಸ್ತಾನವು ಇಲ್ಲಿಗೆ ಬಂದೂಕುಗಳನ್ನು ಕಳುಹಿಸುತ್ತಿದೆ. ಆದರೆ ನಾವು ಅದನ್ನು ಎಂದಿಗೂ ಬಿಡುವುದಿಲ್ಲ ಎಂದೇಳಿದ್ದಾರೆ.