ನವದೆಹಲಿ : ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, 10 ಸಾವಿರ ಪಡೆಯುವ ಅದ್ಭುತ ಅವಕಾಶ ಲಭ್ಯವಾಗಿದೆ. ಹೌದು, ಕೇಂದ್ರ ಸರ್ಕಾರ ಸೂಪರ್ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ್ರೆ, ಉಚಿತವಾಗಿ 10 ಸಾವಿರ ರೂಪಾಯಿ ಪಡೆಯಬೋದು.
ಹಾಗಿದ್ರೆ, ಸ್ಪರ್ಧೆ ಏನು.? ಯಾವಾಗ ನಡೆಯಲಿದೆ.? ನೀವು ಯಾವಾಗ ಹಣ ಪಡೆಯುತ್ತೀರಾ? ಅನ್ನೋ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ರೆ, ಮುಂದೆ ಓದಿ.
ಅಸಲಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪ್ರಯುಕ್ತ ಈ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಹೊಸ ವರ್ಷದಲ್ಲಿ 10 ಸಾವಿರ ಪಡೆಯಲು ಅವಕಾಶ ನಿಮಗಿದೆ. ಅದ್ರಂತೆ, ನೀವು ಗಣರಾಜ್ಯೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದರೆ 10 ಸಾವಿರ ರೂಪಾಯಿ ಕೂತಲ್ಲೇ ಗಳಿಸಬೋದು.
ಕೇಂದ್ರ ಸರ್ಕಾರದ ಮೈಗವ್ ಇಂಡಿಯಾ(MyGov India) ಇತ್ತೀಚೆಗೆ ಇದನ್ನ ಘೋಷಿಸಿದ್ದು, ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ನೀವು ಒಂದು ಜಿಂಗಲ್ ರಚಿಸಬೇಕು.
ನೀವು ಮಾಡುವ ಜಿಂಗಲ್ ಆಕರ್ಷಕವಾಗಿದ್ರೆ, ಅಂದರೆ ಎಲ್ಲರಿಗೂ ಇಷ್ಟವಾದ್ರೆ ನೀವು 10 ಸಾವಿರದವರೆಗೆ ಬಹುಮಾನ ಗೆಲ್ಲಬಹುದು. ಕೇವಲ 10 ಸಾವಿರ ಹೊರತುಪಡಿಸಿ ಇತರೆ ಬಹುಮಾನಗಳೂ ಇವೆ.
ಮೈಗವ್ ಇಂಡಿಯಾ ಪ್ರಕಾರ, ರಕ್ಷಣಾ ಸಚಿವಾಲಯವು ಈ ಸ್ಪರ್ಧೆಯನ್ನ ಆಯೋಜಿಸುತ್ತಿದೆ. ಈ ಸ್ಪರ್ಧೆಯನ್ನ ಮೈಗೌ ಸಹಭಾಗಿತ್ವದಲ್ಲಿ ನಡೆಸಲಾಗುವುದು. 2023ರ ಗಣರಾಜ್ಯೋತ್ಸವಕ್ಕೆ ಜಿಂಗಲ್ ರಚಿಸಬೇಕು. ಸ್ಪರ್ಧೆಯಲ್ಲಿ ನಿಮ್ಮ ಜಿಂಗಲ್ ಗೆದ್ದರೇ, ನಿಮಗೆ 10 ಸಾವಿರ ಬಹುಮಾನ ನೀಡಲಾಗುವುದು.
ಅದ್ರಂತೆ, ನೀವು ರಚಿಸುವ ಜಿಂಗಲ್ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿರಬೇಕು. ಇದು ದೇಶಭಕ್ತಿಯನ್ನ ವ್ಯಕ್ತಪಡಿಸುವುದರ ಜೊತೆಗೆ ಎಲ್ಲಾ ವಯಸ್ಸಿನ ಜನರಿಗೆ ಸಂಬಂಧಿಸಿರಬೇಕು. ಇನ್ನೀದು ಗಣರಾಜ್ಯೋತ್ಸವದ ಮಹತ್ವವನ್ನ ವಿವರಿಸಬೇಕು. ಜತೆಗೆ ಜನರ ಕರ್ತವ್ಯಗಳ ಬಗ್ಗೆಯೂ ಚರ್ಚೆಯಾಗಬೇಕು. ಆದ್ದರಿಂದ ನೀವು ರಚಿಸುವ ಜಿಂಗಲ್ ಈ ಎಲ್ಲಾ ಅಂಶಗಳನ್ನ ಒಳಗೊಂಡಿರಬೇಕು. ಆಗ ಸ್ಪರ್ಧಿಸಲು ಅವಕಾಶ ಸಿಗುತ್ತದೆ.
ಅಂದ್ಹಾಗೆ, ನಿಮ್ಮ ಜಿಂಗಲ್ 25 ರಿಂದ 30 ಸೆಕೆಂಡುಗಳು ಮಾತ್ರ ಇರಬೇಕು. ಇದಕ್ಕೆ ನೀವು ಸ್ಟ್ರಿಪ್ ಸಹ ಸಲ್ಲಿಸಬೇಕಾಗುತ್ತದೆ. ಇನ್ನು ನಿಮ್ಮ ಜಿಂಗಲ್’ನ್ನ ನೀವು ಉತ್ತಮ ಗುಣಮಟ್ಟದ ಆಡಿಯೊ ಫೈಲ್ ಆಗಿ ಅಪ್ಲೋಡ್ ಮಾಡಬೇಕಾಗುತ್ತದೆ. ಅಲ್ಲದೇ ಸ್ಕ್ರಿಪ್ಟ್’ನ್ನ PDF ಡಾಕ್ಯುಮೆಂಟ್ ಆಗಿ ಅಪ್ಲೋಡ್ ಮಾಡಬೇಕಾಗುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಜನವರಿ 20 ರೊಳಗೆ ಜಿಂಗಲ್ ಸಲ್ಲಿಸಬೇಕು. ಜನವರಿ 20ರ ನಂತರ ಸ್ವೀಕರಿಸಿದ ನಮೂದುಗಳನ್ನ ಪರಿಗಣಿಸಲಾಗುವುದಿಲ್ಲ. ಇನ್ನು ಮೂವರಿಗೆ ನಗದು ಬಹುಮಾನ ಸಿಗಲಿದೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ ದೊರೆತರೇ, ದ್ವಿತೀಯ ಸ್ಥಾನಕ್ಕೆ 7 ಸಾವಿರ ನೀಡಲಾಗುವುದು. ಇನ್ನು ಮೂರನೇ ಸ್ಥಾನ ಪಡೆದವರಿಗೆ 5 ಸಾವಿರ ಸಿಗಲಿದೆ.
BIGG NEWS : ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿ ಭಾಷಣ : ಪ್ರಜ್ಞಾ ಠಾಕೂರ್ ವಿರುದ್ಧ ದೂರು ದಾಖಲು| Pragya Thakur
ವಾಯುಭಾರ ಕುಸಿತ : ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ |Rain Alert Bengaluru