ಬೆಳಗಾವಿ : ಸುವರ್ಣಸೌಧಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದಕ್ಕೆ ವಕೀಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸುವರ್ಣಸೌಧ ಪ್ರವೇಶಕ್ಕೆ ಅವಕಾಶ ನೀಡದ ಕಾರಣಕ್ಕೆ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಸುವರ್ಣಸೌಧ ನುಗ್ಗಲು ವಕೀಲರು ಯತ್ನಿಸಿದ್ದಾರೆ. ಇವರನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಮೀಷನರ್ ಬೋರ ಲಿಂಗಯ್ಯ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಅಲ್ಲದೇ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ ವಕೀಲರು ಸುವರ್ಣಸೌಧದ ಒಳಗೆ ಪ್ರವೇಶಿಸಲು ಪಟ್ಟು ಹಿಡಿದಿದ್ದಾರೆ. ವಕೀಲರ ಸಂರಕ್ಷಣೆ ಕಾಯಿದೆ ಜಾರಿ ವಿಧೇಯಕ್ಕೆ ಅಂಗೀಕಾರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
BREAKING NEWS : ಪ್ರಧಾನಿ ಮೋದಿ ‘ಸಹೋದರ’ ಕಾರು ಅಪಘಾತ, ಪುತ್ರ & ಸೊಸೆಗೆ ಗಂಭೀರ ಗಾಯ |Accident