ಮೈಸೂರು: ಪ್ರಧಾನಿ ಮೋದಿ ಸಹೋದರ ಪ್ರಹ್ಹಾದ್ ಮೋದಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ.
ಪ್ರಹ್ಹಾದ್ ಮೋದಿ ಅವರು ತಮ್ಮ ಪುತ್ರ ಹಾಗೂ ಸೊಸೆ ಜೊತೆಗೆ ಮರ್ಸಿಸೀಸ್ ಬೆಂಚ್ ಕಾರಿನಲ್ಲಿ ಮೈಸೂರಿನಿಂದ ಬಂಡೀಪುರ ಕಡೆಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಮೈಸೂರು ಬಳಿಯ ಕಡಕೋಳ ಬಳಿ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಪ್ರಹ್ಹಾದ್ ಮೋದಿ ಅವರ ಮಗ ಹಾಗೂ ಸೊಸೆಗೆ ಗಂಭಿರವಾದ ಗಾಯವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಮೈಸೂರು ಜಿಲ್ಲಾ ಎಸ್ಪಿ ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.