ನವದೆಹಲಿ: ಪುರುಷರಂತೆ ಪಾನ್ ಮಸಾಲಾ, ಗುಟ್ಕಾ ಮತ್ತು ಆಲ್ಕೋಹಾಲ್ ನಾನ್ ವೆಜ್ ಸೇವಿಸುವ ಮೂಲಕ ಪತ್ನಿ ತನ್ನ ಗಂಡನಿಗೆ ಕಿರುಕುಳ ನೀಡಿದರೆ, ಅದು ಕ್ರೌರ್ಯಕ್ಕೆ ಸಮ ಎಂದು ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ರಾಧಾಕಿಶನ್ ಅಗರ್ವಾಲ್ ಅವರ ದ್ವಿಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು ಮತ್ತು ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ಅಂಗೀಕರಿಸಿತು.
ಘಟನೆ ಹಿನ್ನಲೆ: ಕೊರ್ಬಾ ಜಿಲ್ಲೆಯ ಬಂಕಿಮೊಂಗ್ರಾದಲ್ಲಿ ವಾಸಿಸುತ್ತಿದ್ದ ಯುವಕನು ಕತ್ಘೋರಾದ ಯುವತಿಯನ್ನು ಮದುವೆಯಾಗಿದ್ದ. ಇದೇ ವೇಳೇ ಮದುವೆಯಾದ ಏಳು ದಿನಗಳ ನಂತರ ಅಂದ್ರೆ 2015ರ ಮೇ 26ರ ಬೆಳಿಗ್ಗೆ, ಅವರ ಪತ್ನಿ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿಕೊಂಡಿದ್ದರಂತೆ. ಇದೇ ವೇಳೆ ಪತಿ ಅವಳನ್ನು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಕರೆದೊಯ್ದಾಗ, ಅವಳು ಮದ್ಯಪಾನ ಮತ್ತು ಮಾಂಸಾಹಾರ ಮತ್ತು ಗುಟ್ಕಾ ತಿನ್ನುವ ವ್ಯಸನಿ ಎಂದು ಅವನಿಗೆ ತಿಳಿಯಿತು.
ಈ ವಿಷಯ ಆಕೆ ಅತ್ತೆ-ಮಾವಂದಿರಿಗೆ ತಿಳಿದಾಗ, ಅವರು ಅವಳನ್ನು ಚಟದಿಂದ ವಿವಿಧ ರೀತಿಯಲ್ಲಿ ಮನವೊಲಿಸಲು ಪ್ರಯತ್ನಿಸಿದರು, ಕೂಡ ಆಕೆ ಅದನ್ನು ಬಿಡಲು ಅವಳು ಒಪ್ಪಲಿಲ್ಲ ಎನ್ನಲಾಗಿದೆ. ಇದರ ನಂತರ, ಅವನು ತನ್ನ ಅತ್ತೆ-ಮಾವನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದಳಂತೆ. ಇದೇ ವೇಳೇ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಮಹಿಳೆ ಗುಟ್ಕಾ ತಿನ್ನುತ್ತಿದ್ದಳು ಮತ್ತು ಮಲಗುವ ಕೋಣೆಯಲ್ಲಿ ಎಲ್ಲಿಯಾದರೂ ಉಗುಳುತ್ತಿದ್ದಳು ಇದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ ತನ್ನ ಗಂಡನೊಂದಿಗೆ ಜಗಳವಾಡುತ್ತಿದ್ದಳು. 2015ರ ಡಿಸೆಂಬರ್ 30ರಂದು ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದು, ಇದಲ್ಲದೇ ಅವಳು ಎರಡು ಬಾರಿ ಛಾವಣಿಯಿಂದ ಜಿಗಿದಳು ಮತ್ತು ನಂತರ ಎರಡು ಬಾರಿ ಕೀಟನಾಶಕವನ್ನು ಕುಡಿದಳು. ಆದಾಗ್ಯೂ, ಅವಳು ಬದುಕುಳಿ ಉಳಿದಿದ್ದಾಳೆ.
ಈ ನಡುವೆ ಪತ್ನಿಯ ಈ ಕೃತ್ಯಗಳಿಂದ ಅಸಮಾಧಾನಗೊಂಡ ಪತಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು, ಆದರೆ ಕೌಟುಂಬಿಕ ನ್ಯಾಯಾಲಯವು ಪತಿಯ ಅರ್ಜಿಯನ್ನು ವಜಾಗೊಳಿಸಿತು. ಈ ನಿರ್ಧಾರವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವ ಮೂಲಕ ಪತಿಯ ವಿಚ್ಛೇದನ ಮೇಲ್ಮನವಿಯನ್ನು ಹೈಕೋರ್ಟ್ ನ ದ್ವಿಸದಸ್ಯ ಪೀಠವು ಸ್ವೀಕರಿಸಿದೆ.