ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯೆ ಬೆಳಗಾವಿ ಗಡಿ ವಿವಾದ ತಾರಕಕ್ಕೇರಿದೆ.
ರಾಜ್ಯ ಸರ್ಕಾರ ನಿಲುವಳಿ ಮಂಡಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ನಂತರ ಗಡಿ ವಿವಾದ ಕುರಿತು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಣಯ ಮಂಡಿಸಿದ್ದಾರೆ. ಇದನ್ನು ಸಹ ಸರ್ವಾನುಮತದಿಂದ ಅಂಗೀಕರಿಸಲಾಯಿತು.
“ಬೆಳಗಾವಿ, ನಿಪ್ಪಾಣಿ, ಕಾರವಾರದ ಪ್ರತಿಯೊಂದು ಇಂಚು” ಮಹಾರಾಷ್ಟ್ರದ ಭಾಗವಾಗಿರುತ್ತದೆ ಎಂದು ನಿರ್ಣಯದಲ್ಲಿ ಮಂಡಿಸಲಾಯಿತು. ಬೆಳಗಾವಿ, ೮೬೫ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿಲುವಳಿಯನ್ನು ಮಂಡಿಸಿದ್ದಾರೆ.
ಮಹಾರಾಷ್ಟ್ರ ಸೃಷ್ಟಿಸಿದ ಗಡಿ ವಿವಾದವನ್ನು ಕರ್ನಾಟಕ ಗುರುವಾರ ಖಂಡಿಸಿತ್ತು.