ಬಳ್ಳಾರಿ : ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ಅರ್ಹ ರೈತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್. ಅಧಿಕೃತ ಜಾಲತಾಣ ವೆಬ್ಸೈಟ್ www.kredl.karnataka.gov.in ನಲ್ಲಿ ನೀಡಲಾಗಿದೆ.
ಮಾನದಂಡಗಳು: ರೈತರ ಜಮೀನಿನಲ್ಲಿ ಬಾವಿಯನ್ನು ಕೊರೆಸಿ ಸಿದ್ದವಿರಬೇಕು. ಹೊಸ ಕೃಷಿ ಪಂಪ್ಸೆಟ್ಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ (ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್ಸೆಟ್ಗಳು ಅರ್ಹವಿರುವುದಿಲ್ಲ). ಅರ್ಜಿದಾರರು ಒಂದು ಸೌರ ಪಂಪ್ಸೆಟ್ಗೆ ಮಾತ್ರ ಅರ್ಜಿ ಸಲ್ಲಿಸುವುದು. ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಅರ್ಹರಿರುವುದಿಲ್ಲ. ಅರ್ಜಿದಾರರು ಅವರ ವಂತಿಗೆಯನ್ನು ಡಿ.ಡಿ ಮೂಲಕವೇ ಸಲ್ಲಿಸುವುದು. ಚೆಕ್ ಅಥವಾ ಇತರೆ ಆನ್ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ. ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರಚಾಲಿತ ಕೃಷಿ ಪಂಪ್ಸೆಟ್ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ.5ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪ.ಜಾ ಮತ್ತು ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷಚೇತನ ವರ್ಗದವರ ವಂತಿಗೆಯನ್ನು ಪಾವತಿಸಲಾಗುವುದು. ಕೆ.ಆರ್.ಇ.ಡಿ.ಎಲ್ ಅಧಿಕೃತ ಜಾಲತಾಣ www.kredl.karnataka.gov.in ನಲ್ಲಿ ಮಾತ್ರ ಲಭ್ಯವಾಗುವ ಲಿಂಕ್ ಮೂಲಕವೇ ನೊಂದಾಯಿಸಿಕೊಳ್ಳಬಹುದಾಗಿದೆ.
ಅರ್ಜಿದಾರರು ಪಾವತಿಸಬೇಕಾದ ವಂತಿಗೆಗಳು: 3 ಹೆಚ್.ಪಿ ಸಾಮಥ್ರ್ಯದ ಪಂಪ್ಸೆಟ್ಗೆ ಸಾಮಾನ್ಯ ವರ್ಗದವರು ಘಟಕದ ವೆಚ್ಚ ಶೇ.40ರಷ್ಟು 71,422 ರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಘಟಕದ ವೆಚ್ಚ ಶೇ.20ರಷ್ಟು 35,711ರೂ. ಪಾವತಿಸಬೇಕು. 5 ಹೆಚ್ಪಿಗೆ ಸಾಮಾನ್ಯ ವರ್ಗದವರು ರೂ.1,01,056, ಪ.ಜಾತಿ ಮತ್ತು ಪ.ಪಂಗಡದವರು ರೂ.50,528, 7.5 ಹೆಚ್ಪಿಗೆ ಸಾಮಾನ್ಯ ವರ್ಗದವರು ರೂ.1,45,710, ಪ.ಜಾತಿ ಮತ್ತು ಪ.ಪಂಗಡದವರು ರೂ.72856, 10ಹೆಚ್ಪಿಗೆ ಸಾಮಾನ್ಯ ವರ್ಗದವರು ರೂ.2,50,292, ಪ.ಜಾತಿ ಮತ್ತು ಪ.ಪಂಗಡದವರು ರೂ.1,77,438 ಪಾವತಿಸಬೇಕು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.80ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತ ಬಾಂಧವರಿಗೆ ಶೇ.60ರಷ್ಟು ಸಬ್ಸಿಡಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಕೆ.ಆರ್.ಇ.ಡಿ.ಎಲ್. ಪ್ರಾದೇಶಿಕ ಕಚೇರಿ ಅಥವಾ ಮೊ.9986025252, 9742310108 ಗೆ ಸಂಪರ್ಕಿಸಬಹುದು.