ಬೆಂಗಳೂರು :ಕೋವಿಡ್ ಸೋಂಕಿನ ಸರ್ಕಾರ ಬಗ್ಗೆ ಜನರ ಮಧ್ಯೆ ಗೊಂದಲ ಸೃಷ್ಟಿಸಬಾರದು ಎಂದು ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ
ಸುವರ್ಣಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾದ ಬೆನ್ನಲ್ಲೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಫುಲ್ ಅಲರ್ಟ್ ಆಗಿದೆ. ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ಸರ್ಕಾರ ಗಡಿಬಿಡಿಯಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿಸಬಾರದು.
ಜನರಿಗೆ ಮಾಸ್ಕ್ ಹಾಕಿ ಎನ್ನುವ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಲಿ. ಆಕ್ಸಿಜನ್ ಪ್ಲಾಂಟ್ ಕ್ವಾಲಿಟಿ ಚೆಕ್ ಮಾಡಿಕೊಳ್ಳಬೇಕು. ಅನುಷ್ಠಾನ ಮಾಡುವಾಗ ದೂರದೃಷ್ಟಿ ಆಲೋಚನೆ ಆಗಬೇಕು. ಗಡಿಬಿಡಿಯಲ್ಲಿ ಸರ್ಕಾರ ಕೆಲಸ ಮಾಡಬಾರದು ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು. ಜನರಿಗೆ ಆತಂಕ ತರಿಸಬಾರದು.
ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ನಿಜ ಎಂದು ತಿಳಿಯಬಾರದು. ಚೈನಾದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ನೋಡ್ಬೇಕು. ಜನರಿಗೆ ಜಾಗೃತಿ ಮೂಡಿಸಬೇಕು. ಯಾವ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ ಎಂದು ಮಾಹಿತಿ ಬಂದಿಲ್ಲ. ಈ ಸೋಂಕಿನ ತೀವ್ರತೆ, ಸಾವು ಎಷ್ಟು ಆಗುತ್ತೆ ಅನ್ನೋದನ್ನ ಮಾಹಿತಿ ತಿಳಿಸಬೇಕು. ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗುತ್ತೆ ಭಯ ಪಡಿಸುವ ಬದಲು ಎಚ್ಚರಿಕೆ ಕ್ತಮಗಳನ್ನು ನೀಡಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ