ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್ ಅಲರ್ಟ್ ಆಗಿದೆ.
BIGG NEWS : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ಈ ನಿಯಮಗಳ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ
ಈಗಾಗಲೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೊರೊನಾ ನಿಯಮ ಜಾರಿಗೆ ತಂದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕೆಲ ಸರಳ ರೂಲ್ಸ್ಗಳನ್ನ ಸರ್ಕಾರ ಹೊರಡಿಸಿದೆ. ಶಾಲೆ, ಕಾಲೇಜುಗಳಲ್ಲಿ, ಥಿಯೇಟರ್, ಮಾಲ್, ಮಾರ್ಕೆಟ್ನಲ್ಲಿ ಮಾಸ್ಕ ಕಡ್ಡಾಯ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ.
BIGG NEWS : ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಳ : ಶಾಲಾ-ಕಾಲೇಜುಗಳಲ್ಲಿ ಈ ನಿಯಮಗಳ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ
ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಮಾಸ್ಕ್ ಇಲ್ಲದೇ ಜನ ಓಡಾಡುತ್ತಿದ್ದಾರೆ. ಮಾಸ್ಕ್ ಇಲ್ಲದೆಯೇ ವ್ಯಾಪಾರ ವಹಿವಾಟಿನಲ್ಲಿ ಮುಳುಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದಾರೆ. ಬಹುತೇಕ ಮಂದಿ ಮಾಸ್ಕ್ ಇಲ್ಲದೆ ಓಡಾಟ ನಡೆಸುತ್ತಿದ್ದಾರೆ
ಬೆಂಗಳೂರು ನಗರದಲ್ಲಿ ಕೊವಿಡ್ ಗೈಡ್ಲೈನ್ಸ್ ಪಾಲನೆಯಾಗ್ತಿಲ್ಲ. ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರೇ ಮಾಸ್ಕ್ ಧರಿಸುತ್ತಿಲ್ಲ. ಈಗಾಗಲೇ ಬಿಎಂಟಿಸಿ ಆದೇಶ ಹೊರಡಿಸಿದೆ. ನಿತ್ಯ ಬಿಎಂಟಿಸಿ ಬಸ್ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಪ್ರಯಾಣಿಕರು ಮಾಸ್ಕ್ ಹಾಕಿದ್ರು ಬಿಎಂಟಿಸಿ ಸಿಬ್ಬಂದಿ ಹಾಕ್ತಿಲ್ಲ.