ಬೆಳಗಾವಿ : ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ತಡೆಯಲು ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
Froud Alert: ‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಎಚ್ಚರ: ಈಗ ಹೀಗೂ ನಡೆಯುತ್ತೆ ವಂಚನೆ
ವಿಧಾನಪರಿಷತ್ ನಲ್ಲಿ ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2012-13 ಮತ್ತು 2014-15 ನೇ ಸಾಲಿನಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶಿಕ್ಷರ ನೇಮಕಾತಿಯಲ್ಲಿ ಅಕ್ರಮ ತಡೆಯಲು ವಿಷಯ ಪರಿಣತರಿಂದ ಒಂದು ವಿಷಯಕ್ಕೆ ನಾಲ್ಕು ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಅದರಲ್ಲಿ ಎರಡನ್ನು ಮುದ್ರಿಸಿ ಒಂದು ಪತ್ರಿಕೆಯನ್ನು ಬ್ಯಾಂಕ್ ನಲ್ಲಿ ಮತ್ತೊಂದು ಪ್ರಶ್ನೆ ಪತ್ರಿಕೆಯನ್ನು ಖಜಾನೆಯಲ್ಲಿ ಇರಿಸಲಾಗುತ್ತದೆ. ಪರೀಕ್ಷೆಯ ದಿನದಂದು ಯಾವ ಪತ್ರಿಕೆಯನ್ನು ವಿತರಿಸಬೇಕೆಂದು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್: 2023ರಲ್ಲಿ ವೆಂಕಟೇಶ್ವರನ ಗರ್ಭಗುಡಿ 8 ತಿಂಗಳ ಕಾಲ ಬಂದ್.?