ಬೆಂಗಳೂರು: ದಿನಕ್ಕೊಂದು ವಾಮಮಾರ್ಗದ ಮೂಲಕ ಅಕ್ರಮವಾಗಿ ಆನ್ ಲೈನ್ ವಂಚನೆಯನ್ನು ( Online Froud ) ವಂಚಕರು ಶುರು ಮಾಡುತ್ತಿದ್ದಾರೆ. ಈಗ ಹೊಸದಾಗಿ ಮಗದೊಂದು ದಾರಿ ಕಂಡುಕೊಂಡಿರುವಂತ ಆನ್ ಲೈನ್ ವಂಚಕರು, ಕ್ರೆಡಿಟ್ ಕಾರ್ಡ್ ಗೆ ( Credit Card ) ಸಂಬಂಧಿಸಿದಂತ ಮಾಹಿತಿ, ಸಮಸ್ಯೆ ನಿವಾರಿಸುವುದಾಗಿ ಯೂಟ್ಯೂಬ್ ನಲ್ಲಿ ವೀಡಿಯೋ ಹರಿಬಿಟ್ಟು ವಂಚಿಸೋದಕ್ಕೆ ತೊಡಗಿದ್ದಾರೆ. ಅದೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ನಲ್ಲಿನ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಎಂಬುದಾಗಿ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ, ತಿಳಿದುಕೊಳ್ಳೋ ಪ್ರಯತ್ನಕ್ಕೆ ಇಳಿಸಿದ್ದಾರೆ. @TechnicalSANJUJi ಎನ್ನುವಂತ ಯೂಟ್ಯೂಬರ್ ಮಾಡಿದ್ದಂತ ವೀಡಿಯೋ ನೋಡಿ, ಹೆಚ್ಚಿನ ಮಾಹಿತಿಗಾಗಿ ಅವರು ನೀಡಿದ್ದಂತ 9161331706 ಹಾಗೂ 7905911088 ಸಂಖ್ಯೆಗೆ ಸಂಪರ್ಕಿಸಿದ್ದಾರೆ.
ಯೂಟ್ಯೂಬ್ ತಾನು ನಿಮ್ಮ ಖಾತೆಗೆ ಹಣವನ್ನು ಕ್ರೆಡಿಟ್ ಕಾರ್ಡ್ ನಿಂದ ವರ್ಗಾಹಿಸಿ ಕೊಡುವುದಾಗಿ ಹೇಳಿದ್ದಾರೆ. ಅವರ ಮಾತನ್ನು ನಂಬಿದಂತ ಬೆಂಗಳೂರು ಮೂಲಕ ವ್ಯಕ್ತಿ, ಆತ ಕೇಳಿದಂತ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನೀಡಿದ್ದಾರೆ. ಮೊದಲು ತಮ್ಮ ಖಾತೆಗೆ 20,000 ಹಣ ವರ್ಗಾವಣೆ ಮಾಡಿಕೊಂಡಿರುವಂತ ಟೆಕ್ನಿಕಲ್ ಸಂಜು ಎಂಬಾತ, ನಿಮ್ಮ ಖಾತೆಗೆ ಒಂದು ದಿನದಲ್ಲಿ ವರ್ಗಾಹಿಸುವುದಾಗಿ ಹೇಳಿದ್ದಾರೆ.
ಸುಮಾರು 1.55 ಲಕ್ಷದಷ್ಟು ಯೂಟ್ಯೂಬ್ ಫಾಲೋವರ್ಸ್ ಸಂಖ್ಯೆ ಹೊಂದಿದ್ದಂತ ಚಾನಲ್ ಆಗಿದ್ದರಿಂದ, ಟೆಕ್ನಿಕಲ್ ಸಂಜು ಮಾತನ್ನು ನಂಬಿ, ಒಂದು ದಿನ ಬಿಟ್ಟು ತನ್ನ ಕ್ರೆಡಿಟ್ ಕಾರ್ಡ್ ನಿಂದ ನಿಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ ರೂ.20,000 ಹಣ ಮರಳಿ ತಮ್ಮ ಖಾತೆಗೆ ವರ್ಗಾಹಿಸುವಂತೆ ತಿಳಿಸಿದ್ದಾರೆ. ಆಗ ತನ್ನ ಅಸಲಿ ವರಸೆ ಬದಲಿಸಿದಂತ ವಂಚಕ ಟೆಕ್ನಿಕಲ್ ಸಂಜು, ಆಗ ಈಗ ಅಂತ ಹೇಳಿ, ಕೊನೆಗೆ ಅದೇನ್ ಮಾಡಿಕೊಳ್ಳುತ್ತೀಯೋ ಮಾಡಿಕೋ ಹೋಗು, ತಾನು ಹಣ ನೀಡುವುದಿಲ್ಲ ಎಂಬುದಾಗಿ ವಂಚಿಸಿದ್ದಾರೆ. ಇದೀಗ ಬೆಂಗಳೂರು ಮೂಲಕ ಆ ವ್ಯಕ್ತಿ ಸಮೀಪದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ, ಟೆಕ್ನಿಕಲ್ ಸಂಜು ಎನ್ನುವಂತ ಯೂಟೂಬರ್ ವಿರುದ್ಧ ದೂರು ನೀಡಿದ್ದಾರೆ.
ಇನ್ನೂ ಸುದ್ದಿ ಓದುತ್ತಿರುವಂತ ಓದುಗರಾದಂತ ನೀವು, ದಯವಿಟ್ಟು ಇಂತಹ ಯೂಟ್ಯೂಬರ್ ಅನ್ನು ಬೆಂಬಲಿಸಬೇಡಿ. ನನ್ನಂತೆಯೇ ಇತರರಿಗೆ ಟೆಕ್ನಿಕಲ್ ಸಂಜು ಎನ್ನುವಂತ ಯೂಟ್ಯೂಬ್ ಚಾನಲ್ ಮೂಲಕ ವೀಡಿಯೋ ಹಾಕಿ, ಅಲ್ಲಿ ನಂಬರ್ ನೀಡಿ, ಸಂಪರ್ಕಿಸುವವರನ್ನು ಮೋಸ ಮಾಡುವಂತ ಚಾನಲ್ ರಿಪೋರ್ಟ್ ಮಾಡಿ. ಈ ಮೂಲಕ ಈ ಕೆಳಕಂಡ ಯೂಟ್ಯೂಬ್ ಚಾನಲ್ ( YouTube Channel ) ವೀಡಿಯೋಗಳಿಗೆ ಲಿಂಕ್ ಕ್ಲೀಕ್ ಮಾಡಿ ಸ್ಪಾಮ್ ಮತ್ತು ಸ್ಕ್ಯಾಮ್ ಎಂಬುದಾಗಿ ರಿಪೋರ್ಟ್ ಮಾಡುವ ಮೂಲಕ, ವಂಚನೆ ತಡೆಯಲು ಸಹಕರಿಸಿ ಎಂಬುದು ನಮ್ಮ ಕೋರಿಕೆಯೂ ಆಗಿದೆ.