ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಮೇರಿಕಾವು ಬಾಂಬ್ ಸೈಕ್ಲೋನ್ ಪರಿಣಾಮದಿಂದ ಚಳಿಯಿಂದ ಕೂಡಿದಂತ ಥಂಡಿಗೆ ತತ್ತರಿಸಿ ಹೋಗಿದೆ. ಮತ್ತೊಂದೆಡೆ ಜಪಾನ್ ಜನತೆಯು ಹಿಮಪಾತಕ್ಕೆ ನಲುಗಿ ಹೋಗುವಂತೆ ಆಗಿದೆ. ಅಮೇರಿಕಾ, ಜಪಾನ್ ಎರಡೂ ದೇಶಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಚಂಡಮಾರುತ ಸಂಬಂಧಸಿದ ಘಟನೆಯಿಂದ ಬಲಿಯಾದವರ ಸಂಖ್ಯೆ ಅಮೇರಿಕಾದಲ್ಲಿ 48ಕ್ಕೆ ಏರಿಕೆಯಾಗಿದೆ.
ಅಮೇರಿಕಾದಂತೆ ಜಪಾನ್ ನಲ್ಲಿ ಹಿಮಪಾತಕ್ಕೆ ಜನತೆ ನಲುಗಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಸಂಭವಿಸುತ್ತಿರುವಂತ ಹಿಮಪಾತವು, ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳೆತ್ತರದ ಹಿಮಪಾತದಿಂದಾಗಿ ಈವರೆಗೆ ಜಪಾನ್ ನಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ.
ಒಂದೆಡೆ ಬಾಂಬ್ ಸೈಕ್ಲೋನ್ ನಿಂದಾಗಿ ಅಮೇರಿಕಾದಲ್ಲಿ ತಾಪಮಾನ ಕುಸಿತಗೊಂಡಿದ್ದರೇ, ಜಪಾನ್ ನಲ್ಲಿ ಮೂರು ಅಡಿಯಷ್ಟು ತೀವ್ರವಾಗಿ ಸುರಿಯುತ್ತಿರುವಂತ ಹಿಮಪಾತಕ್ಕೆ ಅಗತ್ಯ ವಸ್ತು ಪೂರೈಕೆ, ವಿದ್ಯುತ್ ಸರಬರಾಜಿಗೂ ಅಡ್ಡಿಯಾಗಿ ಜನರು ತತ್ತರಿಸಿ ಹೋಗುವಂತೆ ಮಾಡಿದೆ.
‘SSLC ಪಾಸ್ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಡಿ.28ರಂದು ಶಿವಮೊಗ್ಗದಲ್ಲಿ ‘ಉದ್ಯೋಗ ಮೇಳ’
Health Tips: ಊಟದ ನಂತರ ಹೊಟ್ಟೆ ಉಬ್ಬುತ್ತಿದೆಯೇ? ನಿರ್ಲಕ್ಷಿಸಬೇಡಿ, ಈ ರೋಗದ ಲಕ್ಷಣವಿರಬಹುದು ಪರೀಕ್ಷಿಸಿಕೊಳ್ಳಿ