ಪುಣೆ: ಬೆಳಗಾವಿಯಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗಡಿ ತಂಟೆಗೆ ಬಂದ ಮಹಾರಾಷ್ಟ್ರದ ವಿರುದ್ಧ ಖಂಡನಾ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದರು. ಈ ಮಂಡನೆಗೆ ಸರ್ವಾನುಮತದ ಒಪ್ಪಿಗೆಯನ್ನು ಪಡೆದಿದ್ದರು. ಈ ಬೆನ್ನಲ್ಲೇ ಇಂದು ಕರ್ನಾಟಕದ ವಿರುದ್ಧ ಮಹಾರಾಷ್ಟ್ರದಿಂದ ಖಂಡನಾ ನಿರ್ಣಯವನ್ನು ಮಂಡಿಸಲಿದೆ.
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಜಿದ್ದಿಗೆ ಬಿದ್ದಿರುವಂತ ಮಹಾ ಸರ್ಕಾರವು, ಇಂದು ವಿಧಾನಸಭೆಯಲ್ಲಿ ಗಡಿ ನಿಲುವಳಿಯನ್ನು ಮಂಡಿಸಲಿದೆ. ಕರ್ನಾಟಕಕ್ಕೆ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿ ಪುನರುಚ್ಚರಿಸಿರುವಂತ ಮಹಾ ಡಿಸಿಎಂ ಫಡ್ನವೀಸ್, ಇಂದು ಸದನದಲ್ಲಿ ಗಡಿ ನಿಲುವಳಿಯ ಖಂಡನಾ ನಿರ್ಣಯ ಮಂಡಿಸಲಿದ್ದಾರೆ.
ಕರ್ನಾಟಕ ವಿಧಾನಸಭೆ ಅಂಗೀಕರಿಸಿದಂತ ನಿರ್ಣಯ ಖಂಡಿಸುವಂತ ಗೊತ್ತುವಳಿಯನ್ನು, ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಲು ಡಿಸಿಎಂ ದೇವೇಂದ್ರ ಫಡ್ನವೀಸ್ ನಿರ್ಧರಿಸಿದ್ದಾರೆ.
‘SSLC ಪಾಸ್ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಡಿ.28ರಂದು ಶಿವಮೊಗ್ಗದಲ್ಲಿ ‘ಉದ್ಯೋಗ ಮೇಳ’