ನವದೆಹಲಿ : ಸಾಲ ವಂಚನೆ ಪ್ರಕರಣಕ್ಕೆ(loan fraud case )ಸಂಬಂಧಿಸಿದಂತೆ ಸಿಬಿಐ (CBI) ನ್ಯಾಯಾಲಯವು ಸೋಮವಾರ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಮತ್ತು ವಿಡಿಯೋಕಾನ್ ಸಮೂಹದ ಸಂಸ್ಥಾಪಕ ವೇಣುಗೋಪಾಲ್ ಧೂತ್ (Venugopal Dhoot ) ಅವರನ್ನು ಡಿಸೆಂಬರ್ 28 ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಶುಕ್ರವಾರ ರಾತ್ರಿ ಕೊಚ್ಚರ್ಗಳನ್ನು ತನಿಖಾ ಸಂಸ್ಥೆಯು ಸಂಕ್ಷಿಪ್ತ ಪ್ರಶ್ನೋತ್ತರ ಅವಧಿಯ ನಂತರ ಬಂಧಿಸಿತ್ತು. ಇಂದು ವೇಣುಗೋಪಾಲ್ ಧೂತ್ (71) ಅವರನ್ನು ಅವರನ್ನು ಬಂಧಿಸಲಾಗಿದೆ. ಮೂವರನ್ನೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸಯ್ಯದ್ ಅವರ ಮುಂದೆ ಹಾಜರು ಪಡಿಸಲಾಗಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ. ಲಿಮೋಸಿನ್ ಪ್ರತಿನಿಧಿಸಿದ ಕೇಂದ್ರೀಯ ತನಿಖಾ ದಳವು ಎಲ್ಲಾ ಆರೋಪಿಗಳ ವಿಚಾರಣೆಗಾಗಿ ಮೂರು ದಿನಗಳ ಕಸ್ಟಡಿಗೆ ಕೋರಿತ್ತು.