ನವದೆಹಲಿ: ತಮ್ಮ ನಂಬಿಕೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿರುವ ‘ವೀರ್ ಬಾಲ್ ದಿವಸ್’ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಸುಮಾರು 300 ‘ಬಾಲ್ ಕೀರ್ತನಿಗಳು’ ನಡೆಸಿಕೊಡುವ ‘ಶಬಾದ್ ಕೀರ್ತನೆ’ಯಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಮೋದಿಯವರು ‘ಶಾಬಾದ್ ಕೀರ್ತನ’ದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ದೆಹಲಿಯಲ್ಲಿ ಸುಮಾರು 3,000 ಮಕ್ಕಳಿಂದ ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
#WATCH | PM Modi takes part in a program marking 'Veer Bal Diwas' at Major Dhyan Chand Stadium in Delhi pic.twitter.com/soB5fqADRY
— ANI (@ANI) December 26, 2022
ಇದಕ್ಕೂ ಮುನ್ನ ಟ್ವೀಟ್ ಮಾಡಿದ ಪ್ರಧಾನಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೊನೆಯ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಮಕ್ಕಳಾದ ‘ಸಾಹಿಬ್ಜಾಡೆಗಳ’ ಮಾದರಿ ಧೈರ್ಯದ ಕಥೆಯ ಬಗ್ಗೆ ನಾಗರಿಕರಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತಿಳಿಸಲು ಮತ್ತು ಶಿಕ್ಷಣ ನೀಡಲು ಸರ್ಕಾರವು ದೇಶಾದ್ಯಂತ ಸಂವಾದಾತ್ಮಕ ಮತ್ತು ಭಾಗವಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದೇಳಿದ್ದಾರೆ.
On Veer Baal Diwas, we recall the courage of the Sahibzades and Mata Gujri Ji. We also remember the courage of Sri Guru Gobind Singh Ji.
At 12:30 PM today, will be joining a programme to mark this inspiring day. https://t.co/Bgi5QRaW7N
— Narendra Modi (@narendramodi) December 26, 2022
ಜನವರಿ 9 ರಂದು ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನದ ವೇಳೆ ಡಿಸೆಂಬರ್ 26 ಅನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದರು.
BREAKING NEWS : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಆಸ್ಪತ್ರೆಗೆ ದಾಖಲು | Nirmala Sitharaman
BIGG NEWS : ಕಟ್ಟಡ ಕಾರ್ಮಿಕರೇ ಗಮನಿಸಿ : ಉಚಿತ ಬಸ್ ಪಾಸ್ ಗಾಗಿ ಅರ್ಜಿ ಆಹ್ವಾನ