ಅಂಧ್ರಪ್ರದೇಶ : ತಿರುಪತಿ ಭಕ್ತರಿಗೆ ಬಿಗ್ ಶಾಕ್ ಎದುರಾಗಿದ್ದು, 2023ರಲ್ಲಿ ಅಂಧ್ರಪ್ರದೇಶದ ಪ್ರಸಿದ್ಧ ದೇಗುಲ ತಿರುಮಲ ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 8 ತಿಂಗಳ ಕಾಲ ಮುಚ್ಚಲಿದೆ ಹಿಂದೂಸ್ತಾನ್ ಟೈಮ್ಸ್ ವರದಿ ಬಹಿರಂಗವಾಗಿದೆ.
“ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ(ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಟಿ) ನಿರ್ಧರಿಸಿದ್ದು, ಈ ಕೆಲಸವನ್ನು ಫೆಬ್ರುವರಿ ತಿಂಗಳಿನಲ್ಲಿ ಕೆಲಸ ಆರಂಭಗೊಳ್ಳಲಿದೆ. ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳು ಬೇಕಾಗಬಹುದು. ನೂತನ ಚಿನ್ನದ ಲೇಪನ ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಟಿಟಿಡಿ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.