ಬೆಂಗಳೂರು: ಬಿಎಫ್.7 ಹೆಚ್ಚಿರುವಂತ ದೇಶಗಳಿಂದ ರಾಜ್ಯಕ್ಕೆ ಆಗಮಿಸುವಂತ ವಿದೇಶಿಗರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ವೇಳೆಯಲ್ಲಿ 12 ಮಂದಿಗೆ ಪಾಸಿಟಿವ್ ವರದಿಯಿಂದ ಬಂದಿರೋದಾಗಿ ತಿಳಿದು ಬಂದಿದೆ. ಇವರಲ್ಲಿ ಚೀನಾದಿಂದ ಬಂದಿರುವಂತ ವ್ಯಕ್ತಿಯೊಬ್ಬರು ಸಹ ಸೇರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಎಫ್.7 ಒಮಿಕ್ರಾನ್ ಉಪತಳಿಯ ಆಂತಕ ಹೆಚ್ಚಾಗಿದೆ.
ಚೀನಾದಿಂದ ಬಂದಿರುವಂತ ಆಗ್ರ ಮೂಲಕ 35 ವರ್ಷದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ ಮೂರು ದಿನಗಳಿಂದ ಹೈರಿಸ್ಕ್ ದೇಶಗಳಿಂದ ಬಂದಂತ 12 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಇವರಲ್ಲಿ ಐವರನ್ನು ಹೋಂ ಐಸೋಲೇಷನ್ ಮಾಡಲಾಗಿದ್ದರೇ, ನಾಲ್ವರನ್ನು ಖಾಸಗೀ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರ ಮಾದರಿಯನ್ನು ಜೀನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಪರೀಕ್ಷಾ ವರದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಯುತ್ತಿದ್ದಾರೆ. ಹೀಗಾಗಿ ಈಗ ಬೆಂಗಳೂರಿನಲ್ಲಿಯೂ ಬಿಎಫ್.7 ಕೊರೋನಾ ಆತಂಕ ಹೆಚ್ಚಾಗಿದೆ.
US blizzard: ಅಮೆರಿಕದ ಹಿಮಮಾರುತಕ್ಕೆ 31 ಬಲಿ, ವಿದ್ಯುತ್ ಕಡಿತ, ಸಂಚಾರ ಅಸ್ತವ್ಯಸ್ತ
BIGG NEWS : ಮೈಸೂರಿನ ವಸತಿ ಶಾಲೆಯಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಬಾಲಕ ಸಾವು