ಬೆಂಗಳೂರು: ತುಳಸಿ ಮಾಲೆ ಧರಿಸಿದರೆ ಕೋವಿಡ್ ( Covid-19) ಬಾಧಿಸುವುದಿಲ್ಲ ಎಂದಿದ್ದಾರೆ ಸಂಸದೆ ಹಾಗೂ ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್. ಹಾಗಾದರೆ, ಪಿಎಂ ಕೇರ್ಸ್ ನಿಧಿ ಸಂಗ್ರಹಿಸಿದ್ದೇಕೆ? ಲಸಿಕೆಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇಕೆ? ಕೋವಿಡ್ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದೇಕೆ? ಬಿಜೆಪಿ ಉತ್ತರಿಸುವುದೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ತುಳಸಿ ಮಾಲೆ ಧರಿಸಿದರೆ ಕೋವಿಡ್ ಬಾಧಿಸುವುದಿಲ್ಲ ಎಂದಿದ್ದಾರೆ ಸಂಸದೆ ಹಾಗೂ ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್.
ಹಾಗಾದರೆ,
ಪಿಎಂ ಕೇರ್ಸ್ ನಿಧಿ ಸಂಗ್ರಹಿಸಿದ್ದೇಕೆ?
ಲಸಿಕೆಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇಕೆ?
ಕೋವಿಡ್ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದೇಕೆ?@BJP4Karnataka ಉತ್ತರಿಸುವುದೇ? pic.twitter.com/OaQJTtffmV— Karnataka Congress (@INCKarnataka) December 26, 2022
ಈ ಕುರಿತು ಟ್ವಿಟ್ ಮಾಡಿದ್ದು, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದರೆ ಜೈಲು, ಭ್ರಷ್ಟಾಚಾರ ನಡೆಸಿದವರಿಗೆ ಸನ್ಮಾನ! ಚಿಲುಮೆ ಸಂಸ್ಥೆಗೆ ನೇರವಾಗಿ ಸಹಕರಿಸಿ ಅಮಾನತಾಗಿದ್ದ ಅಧಿಕಾರಿಗಳನ್ನು ತನಿಖೆ ಪೂರ್ಣವಾಗದೆ ಮರುನೇಮಕಗೊಳಿಸಿದ ಸರ್ಕಾರ ತಾನೆಂದೂ ಭ್ರಷ್ಟರ ಪರ ಎಂದು ತೋರಿಸಿದೆ. ಈ ಅಧಿಕಾರಿಗಳು ಸರ್ಕಾರದ ಬುಡ ಅಲ್ಲಾಡಿಸಬಹುದು ಎಂಬ ಭಯವೇ ಬಸವರಾಜ ಬೊಮ್ಮಾಯಿಯವರೇ ಎಂದು ಕೇಳಿದೆ.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದರೆ ಜೈಲು, ಭ್ರಷ್ಟಾಚಾರ ನಡೆಸಿದವರಿಗೆ ಸನ್ಮಾನ!
ಚಿಲುಮೆ ಸಂಸ್ಥೆಗೆ ನೇರವಾಗಿ ಸಹಕರಿಸಿ ಅಮಾನತಾಗಿದ್ದ ಅಧಿಕಾರಿಗಳನ್ನು ತನಿಖೆ ಪೂರ್ಣವಾಗದೆ ಮರುನೇಮಕಗೊಳಿಸಿದ ಸರ್ಕಾರ ತಾನೆಂದೂ ಭ್ರಷ್ಟರ ಪರ ಎಂದು ತೋರಿಸಿದೆ.
ಈ ಅಧಿಕಾರಿಗಳು ಸರ್ಕಾರದ ಬುಡ ಅಲ್ಲಾಡಿಸಬಹುದು ಎಂಬ ಭಯವೇ @BSBommai ಅವರೇ? pic.twitter.com/yXKUopYDHf
— Karnataka Congress (@INCKarnataka) December 25, 2022
ಧರ್ಮದ ಗುತ್ತಿಗೆ ತೆಗೆದುಕೊಂಡ ಬಿಜೆಪಿ ಪಕ್ಷದ ಸಚಿವರೇ ಸ್ವಾಮಿಗಳಿಗೆ ಸವಾಲು ಹಾಕುತ್ತಾ ಅವಮಾನಿಸುತ್ತಿದ್ದಾರೆ, ಹಿಂದೊಮ್ಮೆ ಹಿಂದೂ ದೇವತೆಗಳ ಬಗ್ಗೆ ಕೀಳು ಸಂದೇಶ ಹರಿಬಿಟ್ಟಿದ್ದರು. ಧರ್ಮದ ಗುತ್ತಿಗೆ ಪಡೆದ ಬಿಜೆಪಿ ನಾಯಕರು ಈಗೇಕೆ ಗಪ್ಚುಪ್ ಆಗಿದ್ದಾರೆ? ಸ್ವಾಮಿಜಿಗಳನ್ನು ಅವಮಾನಿಸುವ ಟಾಸ್ಕ್ನ್ನು ಕೇಶವಕೃಪವೇ ನೀಡಿದೆಯೇ? ಎಂದಿದೆ.
ಧರ್ಮದ ಗುತ್ತಿಗೆ ತೆಗೆದುಕೊಂಡ ಬಿಜೆಪಿ ಪಕ್ಷದ ಸಚಿವರೇ ಸ್ವಾಮಿಗಳಿಗೆ ಸವಾಲು ಹಾಕುತ್ತಾ ಅವಮಾನಿಸುತ್ತಿದ್ದಾರೆ, ಹಿಂದೊಮ್ಮೆ ಹಿಂದೂ ದೇವತೆಗಳ ಬಗ್ಗೆ ಕೀಳು ಸಂದೇಶ ಹರಿಬಿಟ್ಟಿದ್ದರು.
ಧರ್ಮದ ಗುತ್ತಿಗೆ ಪಡೆದ @BJP4Karnataka ನಾಯಕರು ಈಗೇಕೆ ಗಪ್ಚುಪ್ ಆಗಿದ್ದಾರೆ?
ಸ್ವಾಮಿಜಿಗಳನ್ನು ಅವಮಾನಿಸುವ ಟಾಸ್ಕ್ನ್ನು ಕೇಶವಕೃಪವೇ ನೀಡಿದೆಯೇ? pic.twitter.com/rBt8YyMdhV
— Karnataka Congress (@INCKarnataka) December 25, 2022