ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹೊತ್ತಲ್ಲೇ ಮತ್ತೆ ಎಂಇಎಸ್ ಬೆಳಗಾವಿಯಲ್ಲಿ ಪುಂಡಾಟ ಮೆರೆದಿದ್ದು, ಬೆಳಗಾವಿ, ನಿಪ್ಪಾಣಿ, ಬೀದರ್, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗಿ ಕ್ಯಾತೆ ತೆಗೆದಿದೆ.
Cold Wave: ತೀವ್ರ ಚಳಿಗೆ ಉತ್ತರ ಭಾರತ ಗಡಗಡ: 5 ಡಿಗ್ರಿ ಕನಿಷ್ಠ ತಾಪಮಾನ ದಾಖಳಿಸಿದ ದೆಹಲಿಯ ಸಪ್ಜರ್ಜಂಗ್
ಬೆಳಗಾವಿಯ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಎಂಇಎಸ್ ಕಾರ್ಯಕರ್ತರು, ಬೆಳಗಾವಿನಿಪ್ಪಾಣಿ, ಕಾರವಾರ, ಬೀದರ್ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪೊಲೀಸರ ಸಮ್ಮುಖದಲ್ಲೇ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ.
ಬೆಳಗಾವಿಯಲ್ಲಿ ಮಹಾಮೇಳಾವ್ ಗೆ ಬ್ರೇಕ್ ನೀಡಿದ ಬೆನ್ನಲ್ಲೇ ಎಂಇಎಸ್ ಹೊಸ ಕ್ಯಾತೆ ತೆಗೆದಿದ್ದು, ಇಂದು ಕೊಲ್ಹಾಪುರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಿಂದ ನಿಪ್ಪಾಣಿ ತಾಲೂಕಿನ ಕೂಗನೊಳ್ಳಿ ಗ್ರಾಮಕ್ಕೆ ಎಂಇಎಸ್ ಕಾರ್ಯಕರ್ತರು ತೆರಳಿದ್ದು, ಅಲ್ಲಿಂದ ಕೊಲ್ಹಾಪುರದ ಡಿಸಿ ಕಚೇರಿಯವರೆಗೆ ಬೈಕ್ ರ್ಯಾಲಿ ನಡೆಸಲಿದ್ದಾರೆ.