ಬೆಲ್ಗ್ರೇಡ್: ಆಗ್ನೇಯ ಸರ್ಬಿಯಾದಲ್ಲಿ ಅಮೋನಿಯಾ ಸಾಗಿಸುತ್ತಿದ್ದ ರೈಲು ಹಳಿತಪ್ಪಿ ಸುಮಾರು 51 ಜನರಿಗೆ ವಿಷಪ್ರಾಶನವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಮೋನಿಯಾ ಸೋರಿಕೆಯಿಂದ 51 ವಿಷಪ್ರಾಶನ ಪ್ರಕರಣಗಳು ಸಂಭವಿಸಿವೆ ಎಂದು ಅಪಘಾತ ಸಂಭವಿಸಿದ ಪಿರೋಟ್ ನಗರದ ಮೇಯರ್ ವ್ಲಾದನ್ ವಾಸಿಕ್ ಹೇಳಿದ್ದಾರೆ.
ಅಮೋನಿಯಾ ಸೋರಿಕೆಯಿಂದಾಗಿ ರೈಲು ನಿಲ್ದಾಣದಲ್ಲಿದ್ದಂತ 7 ಮಂದಿ ತೀವ್ರವಾಗಿ ಅಸ್ವಸ್ಥಗೊಂಡರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿರೋದಾಗಿ ಹೇಳಿದ್ದಾರೆ.
ಸಂಜೆ ರೈಲು ಹಳಿ ತಪ್ಪಿದ್ದು, “ಅಮೋನಿಯಾದ ಸೋರಿಕೆ ಮತ್ತು ವಾತಾವರಣಕ್ಕೆ ದೊಡ್ಡ ಪ್ರಮಾಣದ ಅನಿಲದ ಹರಡುವಿಕೆಗೆ ಕಾರಣವಾಯಿತು” ಎಂದು ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಮೋನಿಯಾ ತುಂಬಿದ್ದ ರೈಲು ಹಳಿ ತಪ್ಪಿ, ವಿಷಾನಿಲ ಸೋರಿಕೆಯಾದಂತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 60,000 ಜನರು ಇರುವಂತ ಬಾಧಿತ ಪ್ರದೇಶದಲ್ಲಿ ಜನರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಈವರೆಗೆ 51 ಮಂದಿ ವಿಷಾನಿಲ ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಸಾವು ನೋವು ವರದಿಯಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.
‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
ಇಂದು ದೆಹಲಿಯ ‘ವೀರ್ ಬಾಲ್ ದಿವಸ್’ ಕಾರ್ಯಕ್ರಮದಲ್ಲಿ ‘ಪ್ರಧಾನಿ ಮೋದಿ’ ಭಾಗಿ | Veer Bal Diwas Programme