ಬೆಳಗಾವಿ : ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ
ಆಂಧ್ರಪ್ರದೇಶದ ಮಾದರಿಯಲ್ಲಿ ಅಕ್ಕಿ ಸಲುವಾಗಿಯೇ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಬೇಕೆಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅನಾರೋಗ್ಯದ ಕಾರರಣ ನೀಡಿ ಬಿಪಿಎಲ್ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಬಿಪಿಎಲ್ ಕಾರ್ಡ್ ಪಡೆದವರ ಹೆಸರಿನಲ್ಲಿ ಅಕ್ಕಿ ದುರುಪಯೋಗವಾಗುತ್ತಿದೆ. ಇದನ್ನು ತಪ್ಪಿಸಲು ಆಂಧ್ರದ ರೀತಿಯಲ್ಲಿ ಅಕ್ಕಿ ಮತ್ತು ಮೆಡಿಕಲ್ ಬಿಪಿಎಲ್ ಕಾರ್ಡ್ ಪ್ರತ್ಯೇಕವಾಗಿ ನೀಡಿ, ಸ್ವಯಂ ಚಾಲಿತವಾಗಿ ಅನುಷ್ಠಾನಕ್ಕೆ ತರಬೇಕೆಂದು ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
BIGG NEWS : ರಾಜ್ಯ ಸರ್ಕಾರದಿಂದ `SC-ST’ ಮೀಸಲು ಹೆಚ್ಚಳ : 25,000 ಹೊಸ ನೇಮಕಾತಿಗೆ ಬ್ರೇಕ್!