ಛತ್ತೀಸ್ ಗಢ: ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಛತ್ತೀಸ್ ಗಡ ಸರ್ಕಾರವು ತಮ್ಮ ರಾಜ್ಯದ ಸರ್ಕಾರಿ ಕಟ್ಟಡಗಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ಬಣ್ಣವನ್ನು ಬಳಸಲಾಗಿದೆ. ಈ ಮೂಲಕ ಗ್ರಾಮೀಣ ಹಾಗೂ ಮಹಿಳೆಯರ ಆರ್ಥಿಕ ಪ್ರಗತಿಗೆ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.
ಹೌದು ಇದು ನಿಮಗೆ ಶಾಕ್ ಎನಿಸಿದರೂ ಸತ್ಯ. ಛತ್ತೀಸ್ ಗಢ ಸರ್ಕಾರವು ರಾಯ್ ಪುರ ಹಾಗೂ ಕನ್ ಕೇಸ್ ನಲ್ಲಿ ಸಗಣಿ ಬಳಸಿ ತಯಾರಿಸಿದಂತ ಬಣ್ಣವನ್ನು ಸರ್ಕಾರಿ ಕಟ್ಟಡಗಳಿಗೆ ಬಳಿದಿದೆ. ಇದಕ್ಕಾಗಿ ಬಾಬಾ ಅಟೋಮಿಕ್ ಸಂಶೋಧನಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವಂತ ಸರ್ಕಾರವು, ಸಗಣಿಯಿಂದ ತಯಾರಿಕೆಯ ಬಣ್ಣವನ್ನು ಸರ್ಕಾರಿ ಕಚೇರಿಗಳಿಗೆ ಬಳಕೆ ಮಾಡಿದೆ.
ಅಂದಹಾಗೇ ಈ ಹೊಸ ಬಣ್ಣದಲ್ಲಿ ಕಾರ್ಬಾಕ್ಸಿಮೀಥಐಲ್ ಸೆಲ್ಯುಲೋಸ್ ಮುಖ್ಯ ಮೂಲ ವಸ್ತುವಾಗಿದೆ. ಪ್ರತಿ 100 ಕೆಜಿ ಗೋವಿನ ಸಗಣಿಯಲ್ಲಿ 10 ಕೆಜಿಯಷ್ಟು ಒಣ ಕಾರ್ಬಾಕ್ಸಿಮೀಥೈಲ್ ಸೆಲ್ಯೂಲೋಸ್ ತಯಾರಿಸಿ, ಅದರ ಮೂಲಕ ಬಣ್ಣವನ್ನು ಉತ್ಪಾದಿಸಲಾಗಿದೆ. ಇಂತಹ ಪರಿಸರ ಸ್ನೇಹಿ ಬಣ್ಣವನ್ನು ಛತ್ತೀಸ್ ಗಢ ಸರ್ಕಾರವು, ತಮ್ಮ ಸರ್ಕಾರಿ ಕಚೇರಿಗಳಿಗೆ ಬಳಿಯುತ್ತಿದೆ.
ಶೂನ್ಯ ಡಿಗ್ರಿಯತ್ತ ಸಾಗಿದ ಉತ್ತರ ಭಾರತ ತಾಪಮಾನ: ಚಳಿಯಿಂದ ಜನತೆ ಗಡಗಡ | Winter Session