ಶ್ರೀನಗರ: ದೇಶದ ವಾಯುವ್ಯ ಹಾಗೂ ಉತ್ತರ ಭಾರತದ ರಾಜ್ಯಗಳಾದಂತ ಜಮ್ಮ ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳ ತಾಪಮಾನದಲ್ಲಿ ಭಾರೀ ಕುಸಿತ ಕಂಡಿದೆ. ಈ ಹಿನ್ನಲೆಯಲ್ಲಿ ಶೂನ್ಯ ಡಿಗ್ರಿಯತ್ತ ತಾಪಮಾನ ದಾಪುಗಾಲಿಟ್ಟು, ಜನತೆ ಕೊರೆವ ಚಳಿಯಲ್ಲಿ ಗಡಗಡ ನಡುಗುವಂತೆ ಮಾಡಿದೆ.
ಇನ್ನೂ ಬಹುತೇಕ ಕಡೆಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗಿಂತ ಕೆಳಗೆ ಇಳಿದಿದೆ. ಅಲ್ಲದೇ ಒಂದೇ ದಿನದಲ್ಲಿ ಉಷ್ಣಾಂಶವು 6 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿದ ಪರಿಣಾಮ, ಹಲವರು ರಾಜ್ಯದ ಜನತ ಚಳಿಯಿಂದ ತತ್ತರಿಸಿ ಹೋಗುವಂತೆ ಆಗಿದೆ.
ಕೆಲ ನಗರಗಳಲ್ಲಿ ದಟ್ಟ ಮಂಜು ಆವರಿಸಿರೋದರಿಂದ ಜನ ಜೀವನದ ಮೇಲೆ ಪರಿಣಾಮ ಬೀರಿ, ಅಸ್ಯವ್ಯಸ್ಥಗೊಳಿಸಿದೆ. ಮನೆಯಿಂದ ಹೊರಗೆ ಬಾರದಂತ ಸ್ಥಿತಿ ಕೆಲವೆಡೆ ನಿರ್ಮಾಣವಾಗಿದೆ.
ಅಂದಹಾಗೇ ಕಾಶ್ಮೀರದ ಪಹಲ್ಗಾಮ್ ನಲ್ಲಿ ಮೈನಸ್ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೇ, ಶ್ರೀನಗರದಲ್ಲಿ ಮೈನಸ್ 5.8ಗೆ ಇಳಿಸಿದೆ.