ಬೆಂಗಳೂರು: ಬೆಂಗಳೂರು ಗೋಪಾಲಗೌಡ ಜಂಕ್ಷನ್ ಬಳಿ ಇಂದು ಕ್ರಿಸ್ ಮಸ್ ಹಬ್ಬ ಹಿನ್ನೆಲೆಯಲ್ಲಿ ಯುವಕನೊಬ್ಬ ಚರ್ಚ್ ಗೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
25 ವರ್ಷದ ಆಲೆಕ್ಸ್ ಮೃತ ದುರ್ದೈವಿ. ಪುಟ್ ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಕುಳಿತಿದ್ದ ಸತೀಶ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಆಲೆಕ್ಸ್ ಮತ್ತು ಸತೀಶ್ ರಿಜಸ್ಟರ್ ನಂಬರ್ ಸಹ ಹಾಕದ ಹೊಸ ಬೈಕ್ನಲ್ಲಿ ಸೆಂಟ್ ಪ್ಯಾಟ್ರಿಕ ಬೆಸಲಿಕಾ ಚರ್ಚ್ಗೆ ತೆರಳುತ್ತಿದ್ದರು.
ಈ ವೇಳೆ ಗೋಪಾಲಗೌಡ ಜಂಕ್ಷನ್ ಬಳಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಫುಟ್ ಪಾತ್ ಗೋಡೆಗೆ ಬೈಕ್ ಗುದ್ದಿದೆ.ಬೈಕ್ ಚಲಾಯಿಸುತ್ತಿದ್ದ ಅಲೆಕ್ಸ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಸತೀಶ್ನಿಗೆ ಗಾಯಗಳಾಗಿವೆ. ಗಾಯಾಳುಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.