ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಆತಂಕ ಶುರುವಾಗಿದ್ದು, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ನಗರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದು, ಕೋವಿಡ್ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ. ಇದೀಗ ಕೊರೊನಾ ಆತಂಕದ ನಡುವೆಯೂ ಅಂತಾರಾಜ್ಯ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರು ಏರ್ ಪೋರ್ಟ್ ನಲ್ಲಿ ಇಂದು 80 ಸಾವಿರಕ್ಕೂ ಹೆಚ್ಚು ಜನರು ವಿದೇಶ ಪ್ರಯಾಣ ಬೆಳಸಲಿದ್ದಾರೆ. ಹೊರ ರಾಜ್ಯ ವಿದೇಶದಿಂದ ಬರಲು 40, 158. ಜನ ಟಿಕೆಟ್ ಬುಕಿಂಗ್ ಆಗಿದೆ. ಬೆಂಗಳೂರಿಂದ ಬೇರೆಡೆ ತೆರಳಲು 46, 783. ಜನರಿಂದ ಟಿಕೆಟ್ ಬುಕ್ಕಿಂಗ್ ಆಗಿದೆ. ಒಟ್ಟು 580 ವಿಮಾನಗಳ ಮೂಲಕ ಇಂದು 80 ಸಾವಿರ ಜನರ ಓಡಾಟ ಮಾಡುತ್ತಿದ್ದಾರೆ. ಇನ್ನು ವಿಮಾನ ಹತ್ತು ಮುನ್ನ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ವಿಮಾನ ಒಳಗಡೆ ಮಾಸ್ಕ್ ಕಡ್ಡಾಯಗೊಳಿಸಿದೆ ಏರ್ ಲೈನ್ಸ್ ಸಿಬ್ಬಂದಿ.