ಕೇಪ್ ಟೌನ್ : ದಕ್ಷಿಣ ಆಫ್ರಿಕಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ದ್ರವ ಪೆಟ್ರೋಲಿಯಂ ಅನಿಲ ಟ್ಯಾಂಕರ್ ಸ್ಪೋಟಗೊಂಡು 10 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ದ್ರವ ಪೆಟ್ರೋಲಿಯಂ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಸ್ಪೋಟಗೊಂಡು 10 ಜನರು ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ. ಜೋಹಾನ್ಸ್ಬರ್ಗ್ನ ಪೂರ್ವದಲ್ಲಿರುವ ಬೋಕ್ಸ್ಬರ್ಗ್ನ ಜೋಹಾನ್ಸ್ಬರ್ಗ್ನ ಟಾಂಬೋ ಸ್ಮಾರಕ ಆಸ್ಪತ್ರೆ ಬಳಿ ಈ ಭೀಕರ ಘಟನೆ ನಡೆದಿದೆ.
ಗ್ಯಾಸ್ ಟ್ಯಾಂಕರ್ ಸುರಂಗ ಮಾರ್ಗವನ್ನು ಪ್ರವೇಶಿಸಲು ಸೇತುವೆಯ ಕೆಳಗಡೆಯಿಂದ ಹೋಗಿದ್ದು, ಈ ವೇಳೆ ಘರ್ಷಣೆ ಉಂಟಾಗಿ ಸ್ಫೋಟ ಉಂಟಾಗಿದೆ. ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾಗ 2ನೇ ಬಾರಿ ಸ್ಫೋಟ ಉಂಟಾಗಿದೆ.