ಅಫ್ಘಾನಿಸ್ತಾನ : ಅಫ್ಘಾನಿಸ್ತಾನದ ತಾಲಿಬಾನ್ ನಡೆಸುತ್ತಿರುವ ಸರ್ಕಾರವು ಮಹಿಳಾ ಹಕ್ಕುಗಳ ಮೇಲಿನ ನಿರ್ಬಂಧ ಹೇರುತ್ತಿದೆ. ಇದೀಗ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಬಾರದಂತೆ ತಡೆಯಲು ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಿಗೆ (NGO) ಆದೇಶ ನೀಡಿದೆ.
ಇಸ್ಲಾಮಿಕ್ ಡ್ರೆಸ್ ಕೋಡ್ ಅನುಸರಿಸದ ಹಿನ್ನೆಲೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮುಂದಿನ ಸೂಚನೆ ಬರುವವರೆಗೂ ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಆರ್ಥಿಕ ಸಚಿವಾಲಯದ ವಕ್ತಾರ ಅಬ್ದುಲ್ ರಹ್ಮಾನ್ ಹಬೀಬ್ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ತಾಲಿಬಾನ್ ನೇತೃತ್ವದ ಆಡಳಿತವು ವಿಶ್ವವಿದ್ಯಾನಿಲಯಗಳನ್ನು ಮಹಿಳೆಯರಿಗೆ ಮುಚ್ಚುವಂತೆ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಂಡಿದೆ. ಈ ಎಲ್ಲಾ ಕ್ರಮಗಳಿಂದಾಗಿ ತಾಲಿಬಾನ್ ಸರ್ಕಾರದ ವಿರುದ್ಧ ತೀವ್ರವಾದ ಟೀಕೆ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಕೂಡ ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 22 ರಂದು, ತಾಲಿಬಾನ್ ಮಹಿಳೆಯರು ದೇಶಾದ್ಯಂತ ವಿಶ್ವವಿದ್ಯಾನಿಲಯಗಳಿಗೆ ಹಾಜರಾಗುವುದನ್ನು ನಿರ್ಬಂಧಿಸುವುದಾಗಿ ಘೋಷಿಸಿತ್ತು. ತಾಲಿಬಾನ್ ಕಳೆದ ವರ್ಷ ಅಧಿಕಾರವನ್ನು ಮರಳಿ ಪಡೆದ ನಂತರ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಬಾಲಕಿಯರ ಮೇಲೆ ಇದೇ ರೀತಿಯ ನೀತಿಗಳನ್ನು ಜಾರಿ ಮಾಡಿದೆ.
ಅಭಿವೃದ್ಧಿ ಏನು ಅನ್ನುವುದನ್ನು ಬಿಜೆಪಿ ತೋರಿಸುತ್ತಿದೆ – ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
BREAKING NEWS: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳಿಂದ ಚಾಕು ಇರಿತ: ಸ್ಥಳದಲ್ಲಿ ಬಿಗುವಿನ ವಾತಾವರಣ