ಬಾಗಲಕೋಟೆ : ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ತಪ್ಪಿಸಿದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಕ್ಷಿ ನೀಡಲು, ಸಾಬೀತುಪಡಿಸಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಸವಾಲು ಹಾಕಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವವರು ಯಾರದೋ ಮಾತು ಕೇಳಿ ಬಾಯಿ ಚಪಲಕ್ಕೆ ಮಾತನಾಡಬಾರದು. ಯಾರೇ ಆಗಲಿ ಆತ್ಮಾವಲೋಕನ ಮಾಡಕೊಂಡು ಮಾತಾಡಬೇಕು. ನನ್ನನ್ನು ಸೋಲಿಸಿಯೇ ತೀರ್ತೀನಿ ಎಂದು ಕೆಲವರು ಸವಾಲು ಹಾಕಿದ್ದಾರೆ. ನನ್ನನ್ನು ಸೋಲಿಸುವುದು, ಗೆಲ್ಲಿಸುವುದು ನನ್ನ ಬೀಳಗಿ ವಿಧಾನಸಭಾ ಕ್ಷೇತ್ರದ ಜನರು. ಅವರ ಆಶೀರ್ವಾದದಿಂದ ನಾನು ಗೆದ್ದಿದ್ದೀನಿ. ನಾನು ಮಂತ್ರಿ ಆಗಿದ್ದು ಪಕ್ಷದ ಹಿರಿಯರಿಂದ ಎಂದು ತಿರುಗೇಟು ನೀಡಿದ್ದಾರೆ.
BIGG NEWS : ಡಿಸೆಂಬರ್ 2023ರವರೆಗೆ ‘ಉಚಿತ ಆಹಾರ ಧಾನ್ಯ’ ಯೋಜನೆ ವಿಸ್ತರಣೆ : ಕೇಂದ್ರ ಸರ್ಕಾರ ಘೋಷಣೆ