ಬೆಂಗಳೂರು : ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು 2022-23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಒಂದು ಮಿಶ್ರತಳಿ ಹಸು ಅಥವಾ ಎಮ್ಮೆಯನ್ನು ಸಹಾಯಧನದೊಂದಿಗೆ ವಿತರಿಸಲಿದೆ.
BIGG NEWS: ಬಳ್ಳಾರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಲಸಿಕೆ ಚುರುಕು
62 ಸಾವಿರ ರೂ. ವೆಚ್ಚದ ಘಟಕಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.33.33 ಅಂದರೆ 20,665 ರೂ. ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25 ಅಂದರೆ 15,500 ರೂ. ಸಹಾಯಧನ ಒದಗಿಸಲಾಗುವುದು. ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವನ್ನು ಫಲಾನುಭವಿಗಳಿಂದ ವಂತಿಗೆ ರೂಪದಲ್ಲಿ ಪಡೆಯಲಾಗುವುದು.
ಜಿಲ್ಲೆಯಲ್ಲಿ ಸಾಮಾನ್ಯ ವರ್ಗ- 46, ಪರಿಶಿಷ್ಟ ಜಾತಿ-10 ಹಾಗೂ ಪರಿಶಿಷ್ಟ ಪಂಗಡ-02 ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರು, ವಿಶೇಷ ಚೇತನರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಗೂ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೊಂದಾಯಿಸಿರಬೇಕು. ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಆಸಕ್ತರು ಆಯಾ ತಾಲ್ಲೂಕುಗಳ ಪಶುಆಸ್ಪತ್ರೆಯ, ಮುಖ್ಯ ಪಶು ವೈದ್ಯಾಧಿಕಾರಿಗಳಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ 2023ರ ಜನವರಿ 5 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ: ಮುಖ್ಯ ಪಶು ವೈದ್ಯಾಧಿಕಾರಿಗಳು(ಆಡಳಿತ), ಪಶುಆ ಸ್ಪತ್ರೆ, ದೇವನಹಳ್ಳಿ-9480910509, ದೊಡ್ಡಬಳ್ಳಾಪುರ–9632047920, ಹೊಸಕೋಟೆ-9448988649, ನೆಲಮಂಗಲ-9845637387 ಅವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಡಾ.ಜಿ.ಎಂ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.