ಬೆಳಗಾವಿ : ನಿವೃತ್ತ ಅರೆಸೇನಾ ಪಡೆಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ನಿವೃತ್ತ ಅರೆಸೇನಾ ಪಡೆಗಳ ಯೋಧರಿಗೂ ಎಲ್ಲಾ ಸೌಲಭ್ಯಗಳನ್ನು ನೀಡಲು ಆದೇಶಿಸಲಾಗಿದೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.
BIG NEWS: ಡಿಸೆಂಬರ್ 27 ರಂದು ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್
ವಿಧಾನಸಭೆಯಲ್ಲಿ ಯು.ಟಿ. ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಗಡಿ ಭದ್ರತಾ ಪಡೆ, ಕೈಗಾರಿಕಾ ಭದ್ರತಾ ಪಡೆಯಂತಹ ಅರೆ ಸೇನಾ ಪಡೆಗಳ ಯೋಧರು ನಿವೃತ್ತರಾದ ಬಳಿಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್ ಎಫ್), ಕೈಗಾರಿಕಾ ಭದ್ರತಾ ಪಡೆ( ಸಿಐಎಸ್ ಎಫ್), ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ ಸೇರಿದಂತೆ ನಿವೃತ್ತ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಜಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿಗಳು ಎಂದು ಪರಿಗಣಿಸಿ ಕೇಂದ್ರ ಸಶಸ್ತ್ರ ಪಡೆ ಮಾಜಿ ಸಿಬ್ಬಂದಿಗಳಿಗೆ ನೀಡುವ ಅರ್ಹ ಸೌಲಭ್ಯ ನೀಡಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
Viral video: ಗಂಭೀರ ಅಪಘಾತದಿಂದ ತಾಯಿಯ ಜೀವ ಉಳಿಸಿದ ಪುಟ್ಟಪೋರ : ‘ಹೀರೋ’ ಎಂದ ನೆಟ್ಟಿಗರು