ಬೆಂಗಳೂರು: ಹೊಸ ವರ್ಷ ಆಚರಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇದೆ. ಹೊಸ ವರ್ಷ ಬರಲ ಮಾಡಿಕೊಳ್ಳಲು ಜನರು ಭರ್ಜರಿ ಸಿದ್ಧತೆ ನಡೆಸಲಾಗಿದೆ.
ಈಗಾಗಲೇ ಶಾಲೆಗಳಿಗೆ ಕ್ರಿಸ್ ಮಸ್ ರಜೆ ಗಳಿರುವುದರಿಂದ ಬಹುತೇಕ ಮಂದಿ ಹೊಸ ವರ್ಷವನ್ನು ಆಚರಿಸಲು ಹೊರಗಡೆ ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿರುವ ಹೊಟೇಲ್ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಇದರ ನುಡವೆಯೇ ಕೊರೋನಾ ಆಂತಕ ಶುರುವಾಗಿದ್ದು, ಮಾಲೀಕರಿಗೆ ಟೆನ್ಷನ್ ಆಗಿದೆ. ಬೆಂಗಳೂರಿನ ಶೇಕಡ 90ರಷ್ಟು ಹೋಟೆಲ್ಗಳು ಭರ್ತಿಗೊಂಡಿದ್ದು, ಸುಮಾರು 55 ಸಾವಿರ ರೂಮ್ಗಳು ಮುಂಚಿತವಾಗಿ ಕಾಯ್ದಿರಿಸಲಾಗಿದೆ.
ರಜೆಗಳು ಇರುವ ಹಿನ್ನೆಲೆ ಅನಿವಾಸಿ ಭಾರತೀಯರು ಮಾತ್ರವಲ್ಲದೆ ಹೊರ ರಾಜ್ಯದ ಜನರು ಕೂಡ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಲ್ಲಿನ ಹೋಟೆಲ್ ರೂಮ್ಗಳಲ್ಲಿ ಉಳಿದುಕೊಳ್ಳಲು ಕೊಠಡಿಗಳನ್ನು ಮುಂಚಿತವಾಗಿ ಬುಕ್ ಮಾಡುತ್ತಿದ್ದಾರೆ. ಈ ನಡುವೆ ಕೊರೋನಾ ಹೆಚ್ಚುತ್ತಿರುವುದು ಮಾಲೀಕರಿಗೆ ಆತಂಕ ಶುರುವಾಗಿದೆ.
ಇನ್ನು ಹೊಸ ವರ್ಷ ಆಚರಣೆಗೆ ನಗರದ ಹೊಟೇಲ್ ಮಾಲೀಕರು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಈಗಾಗಲೇ ಶೇ 90ರಷ್ಟು ಹೋಟೆಲ್ ರೂಮ್ಗಳು ಬುಕ್ ಆಗಿದ್ದು, ಜನರು ಮುಂಗಡವಾಗಿ ಹೋಟೆಲ್ ರೂಮ್ಗಳಿಗೆ ಹಣ ಪಾವತಿ ಮಾಡಿದ್ದಾರೆ. ಈ ನಡುವೆ ಕೊರೋನಾ ಹೆಚ್ಚಳದ ಭೀತಿ ಎದುರಾಗಿದ್ದು, ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ಹೋಟೆಲ್ಗಳಿಗೆ ನಷ್ಟವಾಗಲಿದೆ.