ಬೆಳಗಾವಿ : ಬೀದಿ ಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ಕರಾರುಗಳ ಮೇಲೆ ವಿಧಿಸುತ್ತಿದ್ದ ಮುದ್ರಾಂಕ ಶುಲ್ಕ ರದ್ದು ಉದ್ದೇಶದ ಕರ್ನಾಟಕ ಸ್ಯಾಂಪ್ (4ನೇ ತಿದ್ದುಪಡಿ) ವಿಧೇಯಕ-2022 ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತ ಅನುಮೋದನೆ ಸಿಕ್ಕಿದೆ.
ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ `2023’ ರ ಬ್ಯಾಂಕ್ ರಜೆ ದಿನಗಳ ಪಟ್ಟಿ|Bank Holidays 2023
ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಧೇಯಕ ಮಂಡಿಸಿದ್ದು, ಪಿಎಂ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಅಡಿ ಸಾಲದ ಕರಾರುಗಳ ಮೇಲಿನ ಮುದ್ರಾಂಕ ಶುಲ್ಕ ಮನ್ನಾ ಮಾಡುವ ಸದುದ್ದೇಶದಿಂದ ಕಾಯಿದೆಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.