ಕೆಎನ್ಎನ್ ಡಿಜಿಟಲ್ ಡೆಸ್ಕ್ : ಎಲೋನ್ ಮಸ್ಕ್ ಸಿಇಒ ಆದ ನಂತರ ಟ್ವಿಟ್ಟರ್ ನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಇತ್ತೀಚೆಗೆ ಟ್ವಿಟರ್ ತನ್ನ ಬಳಕೆದಾರರಿಗಾಗಿ ವೀಕ್ಷಣೆ ಎಣಿಕೆ ವೈಶಿಷ್ಟ್ಯವನ್ನು ಹೊರತಂದಿದೆ. ಡಿಸೆಂಬರ್ 22 ರಿಂದ ವೀಕ್ಷಣೆ ಎಣಿಕೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ನಿಮ್ಮ ಟ್ವೀಟ್ಗಳನ್ನು ಎಷ್ಟು ಜನರು ವೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ.
ಈ ಕುರಿತಂತೆ ಎಲೋನ್ ಮಸ್ಕ್ ಟ್ವೀಟ್ ಮೂಲಕ ವೈಶಿಷ್ಟ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ವೀಟ್ಗಳ ವೀಕ್ಷಣೆ ಎಣಿಕೆ ಬಳಕೆದಾರರಿಗೆ ಟ್ವೀಟ್ ಅನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ ಎಂಬುದನ್ನು ನೋಡಲು ಅನುಮತಿಸುತ್ತದೆ. ಈ ಹೊಸ ವೈಶಿಷ್ಟ್ಯವು ವಿಡಿಯೋಗಳಿಗೆ ಇದೆ ಎಂದು ಅವರು ಹೇಳಿದ್ದಾರೆ.
Twitter is rolling out View Count, so you can see how many times a tweet has been seen! This is normal for video.
Shows how much more alive Twitter is than it may seem, as over 90% of Twitter users read, but don’t tweet, reply or like, as those are public actions.
— Elon Musk (@elonmusk) December 22, 2022
ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಟ್ವೀಟ್ ಗಳನ್ನು ಎಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಪ್ಲಾಟ್ಫಾರ್ಮ್ನಲ್ಲಿರುವ ವಿಡಿಯೋಗಳಿಗೆ ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿದೆ.
ಬೆಳಗಾವಿಯಲ್ಲಿ ‘ಸ್ಟಾರ್ ಕೆಟಗರಿ ಇಂಡಸ್ಟ್ರಿಯಲ್ ಏರಿಯಾ’ ಸ್ಥಾಪನೆಗೆ ಕರ್ನಾಟಕ ಸರ್ಕಾರ ನಿರ್ಧಾರ