ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರತಿವರ್ಷದಂತೆ ಈ ವರ್ಷವು ರಿಲಯನ್ಸ್ ಜಿಯೋ ‘ಹೊಸ ಹ್ಯಾಪಿ ನ್ಯೂ ಇಯರ್ 2023’ ಪ್ಲಾನ್ ಅನ್ನು ಪರಿಚಯಿಸಿದೆ. ಈ ಯೋಜನೆ ಬೆಲೆ, ಪ್ರಯೋಜನಗಳ ಕುರಿತಂತೆ ಮಾಹಿತಿ ಇಲ್ಲಿದೆ.
ರೀಚಾರ್ಜ್ ಮಾಡುವುದು ಹೇಗೆ
ರೂ. 2023 ಪ್ಲಾನ್ ಈಗ Jio.com ನಲ್ಲಿ ಲಭ್ಯವಿದೆ. ಯೋಜನೆಗೆ ಚಂದಾದಾರರಾಗಲು ಅಗತ್ಯವಿರುವ ಬಳಕೆದಾರರು MyJio ಅಪ್ಲಿಕೇಶನ್ ಅಥವಾ ಗೂಗಲ್ ಪೇ (Google Pay), ಫೋನ್ ಪೇ ( PhonePe) ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.
ಹೊಸ ಪ್ಲಾನ್ ಪ್ರಯೋಜನಗಳು
2023 ರ ಈ ಯೋಜನೆಯು, 252 ದಿನಗಳವರೆಗ ಲಭ್ಯವಿರಲಿದೆ. ಇದಲ್ಲದೇ ಈ ಯೋಜನೆಯಲ್ಲಿ 9 ತಿಂಗಳವರೆಗೆ ಅನಿಯಮಿತ ಕರೆ ಸೌಲಭ್ಯ, ಪ್ರತಿದಿನ 2.5GB ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್ಗಳಿಗೆ ಪೂರಕ ಚಂದಾದಾರಿಕೆ ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು ಸಹ ನೀಡುತ್ತದೆ. ಹೊಸ ವರ್ಷದ ಕೊಡುಗೆಯ ಭಾಗವಾಗಿ, ಜಿಯೋ ಹೊಸ ಚಂದಾದಾರರಿಗೆ ಕಾಂಪ್ಲಿಮೆಂಟರಿ ಪ್ರೈಮ್ ಸದಸ್ಯತ್ವವನ್ನು ಸಹ ನೀಡುತ್ತಿದೆ.
ಈ ಯೋಜನಗಳನ್ನು ಟ್ರೈ ಮಾಡಿ
ರೂ 2999 ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಒಟ್ಟು 912.5GB ಡೇಟಾ ಅಂದರೆ ದಿನಕ್ಕೆ 2.5GB ಹೈ ಸ್ಪೀಡ್ ಡೇಟಾ ಲಭ್ಯವಿರಲಿದೆ. ಉಳಿದಂತೆ ಅನಿಯಮಿತ ಕರೆ, ಮೆಸೇಜ್ ಗಳು ಲಭ್ಯವಿರಲಿವೆ.
ಇದರ ಹೊರತಾಗಿ ರಿಲಯನ್ಸ್ ಜಿಯೋ ಪ್ರಸ್ತುತ 3 ವಾರ್ಷಿಕ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ರೂ 2999, ರೂ 2874 ಮತ್ತು ರೂ 2545 ರ ಯೋಜನೆಗಳು ಸೇರಿವೆ. ಇವುಗಳ ಕುರಿತಾದ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಸಿಗಲಿವೆ.
ಐಐಟಿ ಪ್ರವೇಶಕ್ಕೆ JEE ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ