ಪಾಟ್ನಾ: ಬಿಹಾರದ ಆರ್ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಬಾರಿ ಸಿದ್ದಿಕಿ ಅವರು ನಮ್ಮ ದೇಶದಲ್ಲಿ ವಾತವಾರಣ ಸರಿಯಿಲ್ಲ. ಹಾಗಾಗಿ ತಮ್ಮ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿ ಅಲ್ಲೇ ನೆಲೆಸುವಂತೆ ಸಲಹೆ ನೀಡಿರುವುದಾಗಿ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅಬ್ದುಲ್ ಬಾರಿ ಸಿದ್ದಿಕಿ ಮಾತನಾಡುತ್ತಾ, ದೇಶದ ವಾತಾವರಣವನ್ನು ಉಲ್ಲೇಖಿಸುತ್ತಾ, ನನಗೆ ಹಾರ್ವರ್ಡ್ನಲ್ಲಿ ಓದುತ್ತಿರುವ ಒಬ್ಬ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪದವಿದರೆಯಾಗಿರುವ ಮಗಳು ಇದ್ದಾರೆ. ಅವರಿಬ್ಬರಿಗೂ ಅಲ್ಲಿಯೇ ಕೆಲಸ ಹುಡುಕಿಕೊಂಡು, ಸಾಧ್ಯವಾದರೆ ಅಲ್ಲಿನ ಪೌರತ್ವವನ್ನು ಪಡೆದುಕೊಳ್ಳಿ ಎಂದು ತಿಳಿಸಿದ್ದೇನೆ ಎಂದಿದ್ದರು.
ನನ್ನ ಮಕ್ಕಳಿಗೆ ಈ ಮಾತು ಹೇಳಿದಾಗ ಅವರು ನಂಬಲಿಲ್ಲ. ಆದರೆ ನಾನು ಇನ್ನೂ ಭಾರತದಲ್ಲಿದ್ದೇನೆ. ಆದರೆ ನನ್ನ ಮಕ್ಕಳಿಗೆ ಇಲ್ಲಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಒಬ್ಬ ವ್ಯಕ್ತಿಗೆ ತನ್ನ ಸ್ವಂತ ಮಕ್ಕಳನ್ನು ತಾಯ್ನಾಡನ್ನು ಬಿಟ್ಟು ಹೋಗುವಂತೆ ಹೇಳುವುದು ಎಷ್ಟು ಕಷ್ಟ ಎಂದು ನೀವೇ ಊಹಿಸಬಹುದು ಎಂದು ಹೇಳಿದ್ದರು.
ಇತ್ತ ನಾಯಕ ಟೀಕೆಗಳನ್ನು ಬಿಜೆಪಿಯ ಬಿಹಾರ ಘಟಕ ಖಂಡಿಸಿದ್ದು, ಅವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸೂಚಿಸಿದೆ.
ಸಿದ್ದಿಕಿ ಅವರ ಹೇಳಿಕೆಗಳು ಭಾರತ ವಿರೋಧಿಯಾಗಿದೆ. ಅವರು ತುಂಬಾ ಉಸಿರುಗಟ್ಟುತ್ತಿದ್ದರೆ, ಅವರು ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಟೀಕಿಸಿದ್ದಾರೆ.
ಸಿದ್ಧಿಕಿ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ (ತೇಜಸ್ವಿ ಯಾದವ್ ಅವರ ತಂದೆ) ಅವರ ಆಪ್ತ ಸಹಾಯಕರಾಗಿದ್ದಾರೆ. ಅವರ ಮಾತುಗಳು ಅವರ ಪಕ್ಷದ ಮುಸ್ಲಿಂ ತುಷ್ಟೀಕರಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
Viral Video: ನನ್ನ ವಧು ಎಲ್ಲಿ? ಮದುವೆಯ ಡ್ರೆಸ್ ಧರಿಸಿ 50 ಪುರುಷರು ಮಹಾರಾಷ್ಟ್ರದ ಡಿಸಿ ಕಚೇರಿಗೆ ಜಾಥ
ಒಕ್ಕಲಿಗರ ಮೀಸಲಾತಿ ಶೇ 12ಕ್ಕೆ ಹೆಚ್ವಿಸಲು ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಕೆ