ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗೋವಾದಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದಿದ್ದಾರೆ.
BIGG NEWS: ಬೆಳಗಾವಿ ಚಳಿಗಾಲ ಅಧಿವೇಶನದ ಐದನೇ ದಿನವೂ ತಟ್ಟಿದ ಪ್ರತಿಭಟನೆಯ ಕಾವು
ಚಿಕೆ ಆ್ಯಂಥೋನಿ ಬಂಧಿ ಆರೋಪಿ. ಈತ ಕಳೆದ 4 ವರ್ಷದ ಹಿಂದೆ ಭಾರತಕ್ಕೆ ಬಂದಿದ್ದನು. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಲು ಆಫ್ರೀಕಾ ಮಂದಿ ಜೊತೆ ನಂಟು ಇಟ್ಟುಕೊಂಡಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ಬ್ಯುಸಿನೆಸ್ ವಿಸಾದಲ್ಲಿ ಬಂದ ಆ್ಯಂಥೋನಿ, ಹೆಚ್ಚಿನ ಹಣ ಸಂಪಾದಿಸಲು ಗೋವಾದಲ್ಲಿರುವ ಆಫ್ರಿಕನ್ಗಳಿಂದ ಡ್ರಗ್ ತರಿಸಿಕೊಳ್ಳುತ್ತಿದ್ದನು.
BIGG NEWS: ಬೆಳಗಾವಿ ಚಳಿಗಾಲ ಅಧಿವೇಶನದ ಐದನೇ ದಿನವೂ ತಟ್ಟಿದ ಪ್ರತಿಭಟನೆಯ ಕಾವು
ಬಳಿಕ ಬೆಂಗಳೂರಿನ ಹಲವು ಪಾರ್ಟಿಗಳಿಗೆ ಮಾರಾಟ ಮಾಡಿ ಕಾನೂನು ಬಾಹಿರವಾಗಿ ಹಣ ಸಂಪಾದಿಸುತ್ತಿದ್ದನು. ಈ ಹಿಂದೆ ಕೆಜಿಹಳ್ಳಿಯ ಎನ್ಡಿಪಿಎಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಆರೋಪಿ, ಸದ್ಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ.ಬಂಧಿತನಿಂದ ಸುಮಾರು 25 ಲಕ್ಷ ಮೌಲ್ಯದ 250 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.