ಬೆಂಗಳೂರು : ಚೀನಾದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ಬೆಂಗಳೂರಿನಲ್ಲಿ ಇಂದಿನಿಂದ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಿಬಿಎಂಪಿ ಮಾರ್ಷಲ್ಗಳಿಂದ ಶೇಷ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು
ಸಿಲಿಕಾನ್ ಸಿಟಿಯ ಜನ ನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಅವೆನ್ಯೂ ರೋಡ್, ಮಲ್ಲೇಶ್ವರಂ, ಎಂಜಿ ರೋಡ್, ಬ್ರಿಗೇಟ್ ರೋಡ್, ಲಾಲ್ಬಾಗ್ ಸುತ್ತಮುತ್ತ ಹಲವಡೆ ಅನ್ಸೌಸ್ ಮಾಡುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಹಾಕಿ ಬೂಸ್ಟರ್ ಡೋಸ್ ಹಾಕಿಕೊಳ್ಳಿ ಎಂದು ವಿಶೇಷ ವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಲಾಗುತ್ತಿದೆ ಕೊರೊನಾ ಮಾರ್ಗ ಸೂಚಿಗಳನ್ನು ಪಾಲಿಸಬೇಕಾಗಿ ಒತ್ತಾಯಿಸಲಾಗುತ್ತಿದೆ
ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು
ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಪ್ರಪಂಚದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು (Covid-19) ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡಿ 22ರಂದು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ಕೇಂದ್ರ ಸರ್ಕಾರ ವಿದೇಶದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ (guidelines) ಪ್ರಕಟಿಸಿದೆ.
ಪ್ರೇಯಸಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪಾಗಲ್ ಪ್ರೇಮಿಯೂ ವಿಷ ಕುಡಿದು ಸಾವು
ವಿದೇಶದಿಂದ ಬರುವವರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು. ಏರ್ಪೋರ್ಟ್ಗಳಲ್ಲಿ ಮಾಸ್ಕ್ ಹಾಗೂ ದೈಹಿಕ ಅಂತರ ಪಾಲಿಸಬೇಕು. ಏರ್ಪೋರ್ಟ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಕೊವಿಡ್ ಗುಣಲಕ್ಷಣ ಕಂಡುಬಂದ್ರೆ ಐಸೋಲೇಷನ್ ಕಡ್ಡಾಯ. ಇನ್ಮುಂದೆ ಏರ್ಪೋರ್ಟ್ಗಳಲ್ಲಿ ಱಂಡಮ್ ಟೆಸ್ಟ್ ಕಡ್ಡಾಯ. ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ. 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ಅಗತ್ಯವಿಲ್ಲ. 12 ವರ್ಷದೊಳಗಿನವರಿಗೆ ಸೋಂಕಾದ್ರೆ ಮನೆಯಲ್ಲೇ ಐಸೋಲೇಷನ್.