ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ( Karnataka Public Service Commission -KPSC ) ನಡೆಸುವಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ( Competitive Exam ) ಮಹತ್ವದ ಬದಲಾವಣೆಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬೇಸೆಡ್ ನೇಮಕಾತಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಹೀಗಾಗಿ ಪ್ರಾಯೋಗಿಕವಾಗಿ ಅಣಕು ಪರೀಕ್ಷೆಯನ್ನು ಜನವರಿ 7ರಂದು ಹಮ್ಮಿಕೊಂಡಿದ್ದು, ಆನ್ ಲೈನ್ ಮೂಲಕ ಅರ್ಜಿಯನ್ನು ಪರೀಕ್ಷೆಗೆ ಆಹ್ವಾನಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಆಯೋಗದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ Computer Based Recruitment Test – CBRT ಮಾದರಿಯಲ್ಲಿ ನಡೆಸಲು ನಿರ್ಧಿಸಿರುವ ಹಿನ್ನಲೆಯಲ್ಲಿ ಪ್ರಥಮವಾಗಿ ಸಿಬಿಆರ್ ಟಿ ಪರೀಕ್ಷೆಯನ್ನು ( CBRT Exam ) ನಡೆಸಲು ಸಾಧ್ಯತೆಗಳನ್ನು ಪರಿಶೀಲಿಸಲು ಪ್ರಾಯೋಗಿಕವಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ದಿನಾಂಕ 07-01-2023ರಂದು ಒಂದು ಅಣಕು ಪರೀಕ್ಷೆಯನ್ನು ( mock test ) ಆಯ್ದ ಜಿಲ್ಲಾ ಕೇದ್ರಗಳಲ್ಲಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ.
ಇನ್ನೂ ದಿನಾಂಕ 07-01-2023ರಂದು ಅಣಕು ಪರೀಕ್ಷೆಯಲ್ಲಿ ಇಚ್ಛೆ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು, ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯು ದಿನಾಂಕ 23-12-2022ರಿಂದ ಪ್ರಾರಂಭವಾಗಲಿದೆ. ದಿನಾಂಕ 31-12-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://kpsc.kar.nic.in ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿ ಎಂದು ಹೇಳಿದೆ.
ವರದಿ: ವಸಂತ ಬಿ ಈಶ್ವರಗೆರೆ
BIGG NEWS : ಗ್ರಾಮ ಪಂಚಾಯತಿ ಸದಸ್ಯರಿಗೂ ಪಿಂಚಣಿ ಸೌಲಭ್ಯ : ಸಿಎಂ ಬೊಮ್ಮಾಯಿ ಘೋಷಣೆ
BIGG NEWS : ‘ಮಿನಿ ಅಂಗನವಾಡಿ’ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್ : ಗೌರವಧನ 10 ಸಾವಿರ ರೂ.ಗೆ ಹೆಚ್ಚಳ