ನವದೆಹಲಿ : ದುಬಾರಿ LPG ಸಿಲಿಂಡರ್ಗಳ ಭಾರ ಎದುರಿಸುತ್ತಿರುವ ಜನರು ಹೊಸ ವರ್ಷದಲ್ಲಿ ದೊಡ್ಡ ಪರಿಹಾರವನ್ನ ಪಡೆಯಬಹುದು. ಈ ವರ್ಷದ ಜುಲೈನಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30ರಷ್ಟು ಕಡಿಮೆಯಾಗಿದೆ. ಆದ್ರೆ, ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂಪಾಯಿ ಇದೆ. ಹೀಗಾಗಿ ಹೊಸ ವರ್ಷದಲ್ಲಿ, ಎಲ್ಪಿಜಿ ಬೆಲೆಯಲ್ಲಿ ಸರ್ಕಾರವು ದೊಡ್ಡ ರಿಯಾಯಿತಿಯನ್ನ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲಿ ಈ ಸುದ್ದಿ ಜನರಿಗೆ ತುಂಬಾ ನಿರಾಳ ನೀಡಲಿದೆ.
ಜುಲೈ 2022ರ ನಂತರ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.!
ಭಾರತದಲ್ಲಿ ಅದರ ಅವಶ್ಯಕತೆಗೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲ. ಹೀಗಾಗಿ ಪೂರೈಕೆಗಾಗಿ ಹೊರ ದೇಶಗಳನ್ನ ಅವಲಂಬಿಸಬೇಕಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತದೆ ಮತ್ತು ಇಳಿಯುತ್ತವೆ. ತೈಲ ಮತ್ತು ಅನಿಲದ ಬೆಲೆಯನ್ನ ನಿಗದಿಪಡಿಸುವ ಹಕ್ಕನ್ನು ಸರ್ಕಾರವು ಸರ್ಕಾರಿ ಕಂಪನಿಗಳಿಗೆ (ಆಯಿಲ್ ಮಾರ್ಕೆಟಿಂಗ್ ಕಂಪನಿಗಳು) ನೀಡಿದೆ. ಈ ಕಂಪನಿಗಳು ಜುಲೈ 6, 2022 ರಿಂದ LPG ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಇನ್ನು ಇದುವರೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆಗಳು ಶೇಕಡಾ 30 ರಷ್ಟು ಕುಸಿದಿದೆ. ಅಂದರೆ ಕಂಪನಿಗಳು ತೈಲ ಮತ್ತು ಅನಿಲವನ್ನ ಅತ್ಯಂತ ಅಗ್ಗವಾಗಿ ಖರೀದಿಸಿ ಜನರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ. ಹೀಗಾಗಿ ಹೊಸ ವರ್ಷಕ್ಕೆ ಬೆಲೆ ಇಳಿಕೆ ಉಡುಗೊರೆ ಸಿಗಲಿದೆ ಎನ್ನಲಾಗ್ತಿದೆ.
BIGG NEWS : ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಬಿಗ್ ಶಾಕ್: ಕನಿಷ್ಠ ವೇತನ, ESI ಸೌಲಭ್ಯ ವಿಸ್ತರಣೆ ಇಲ್ಲ