ಬೆಂಗಳೂರು : ರಾಜ್ಯದ 4 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಜನವರಿಯಲ್ಲಿ ಮೂರು ದಿನ ವಿದ್ಯಾರ್ಥಿಗಳಿಗೆ`ಕಲಿಕಾ ಹಬ್ಬ’ ಆಚರಣೆಗೆ ನಿರ್ಧರಿಸಿದೆ.
ಶಿಕ್ಷಣ ಇಲಾಖೆಯು ಕಲಿಕಾ ಚೇತರಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಲಿಕಾ ಹಬ್ಬ ಆಯೋಜಿಸಲಾಗುತ್ತಿದ್ದು, ಜನವರಿಯಿಂದ ಫೆಬ್ರವರಿ ಅವಧಿಯೊಳಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿಕೊಂಡು ಹಬ್ಬ ಆಚರಣೆ ಮಾಡಲು ನಿರ್ಧರಿಸಿದೆ. 4 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಸದ್ಯ ಕಲಿಕಾ ಹಬ್ಬ ಆಚರಣೆ ಸಂಬಂಧ ಕ್ಷೇತ್ರ ಸಂಪನ್ಮೂಲಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನಾವೀನ್ಯತೆ ಹಾಗೂ ಒಳಗೊಳ್ಳುವಿಕೆ ಭೋಧನೆಗೆ ಪ್ರೋತ್ಸಾಹ ನೀಡುವುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸಿ ಅವರಲ್ಲಿ ಪ್ರಶ್ನೆ ಮೂಡುವಂತೆ ಮಾಡುವುದು. ಕಲಿಯುವ ಪ್ರಕ್ರಿಯೆ ಯನ್ನು ಸಂತಸದಾಯಕಗೊಳಿಸುವುದು, ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
BREAKING NEWS : ‘ನಕಲಿ ದಾಖಲೆ’ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಸಂಚು : ‘ಸಬ್ ರಿಜಿಸ್ಟ್ರಾರ್’ ಸೇರಿ ನಾಲ್ವರು ಅಂದರ್