ಬೆಂಗಳೂರು : ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಸಬ್ ರಿಜಿಸ್ಟ್ರಾರ್ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆರ್ ಆರ್ ನಗರ ಜನನ ಮರಣ ಸಬ್ ರಿಜಿಸ್ಟ್ರಾರ್ ನವೀನ್, ಪುಟ್ಟಮ್ಮ, ಪ್ರಸಾದ್, ದಿವ್ಯಾ ಎಂದು ಗುರುತಿಸಲಾಗಿದೆ. ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ಮೇಲೆ ಆರ್ ಆರ್ ನಗರದ ಸಮೀಪ ಪಟ್ಟಣಗೆರೆಯಲ್ಲಿ ಕೋಟ್ಯಾಂತರ ಮೌಕ್ಯದ 3 ಎಕರೆ ಖಾಸಗಿ ಜಮೀನು ಗುಳುಂ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಟ್ರನ್ಕಕೋ ಇನ್ ಫ್ರಾ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ವಂಚನೆ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
BIGG NEWS : ಪಂಚಮಸಾಲಿಗೆ ‘2 ಎ’ ಮೀಸಲಾತಿ ಬದಲು ಹೊಸ ‘ಪ್ರವರ್ಗ’ ನೀಡಲು ರಾಜ್ಯ ಸರ್ಕಾರ ಚಿಂತನೆ..?