ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪಾವತಿಸಲು ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು , ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಾರ್ಚ್/ಏಪ್ರಿಲ್-2023ರ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವ ಚಲನ್ ಮಂಡಲಿಯ ಶಾಲಾ ಲಾಗಿನ್ನಲ್ಲಿಯೇ ದಿನಾಂಕ: 21-12-2022 ರಿಂದ ಜನರೇಟ್ ಆಗಿದ್ದು, ಶಾಲಾ ಲಾಗಿನ್ನಲ್ಲಿ ಸೃಜಿಸಲಾಗುವ ಚಲನ್ನ್ನು ಬಳಸಿಯೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಸೂಚನೆ ನೀಡಲಾಗಿದೆ.
ಒಮ್ಮೆ ಚಲನ್ ಡೌನ್ಲೋಡ್ ಮಾಡಿಕೊಂಡ ನಂತರ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಯಾವುದೇ ಸೇರ್ಪಡೆ, updation or delete ಮಾಡಬೇಕಾಗಿದ್ದಲ್ಲಿ ಅದನ್ನು ಮಾಡಿ ನಂತರವೇ ಚಲನ್ ಡೌನ್ಲೋಡ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಮಂಡಲಿಯ ಶಾಲಾ ಲಾಗಿನ್ನಲ್ಲಿ ಚಲನ್ ಜನರೇಟ್ ಮಾಡಲು Registration for 2023 SSLC Main Exam ಮೆನುವಿನಲ್ಲಿ ನೀಡಲಾಗಿರುವ Dropdown list ನಲ್ಲಿರುವ Download Challan – 2023 SSLC Exam ಮೆನು ಮೇಲೆ ಕ್ಲಿಕ್ ಮಾಡಿದಾಗ, ಮೊದಲು ಅಂತಿಮ ನಾಮಿನಲ್ ರೋಲ್ನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು. ನಾಮಿನಲ್ ರೋಲ್ನ್ನು ಡೌನ್ಲೋಡ್ ಮಾಡಿಕೊಂಡ ನಂತರವೇ ಚಲನ್ ಡೌನ್ಲೋಡ್ ಆಗುತ್ತದೆ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ಡಿ.21 ರಿಂದ 27 ರವರೆಗೆ ದಿನಾಂಕನಿಗದಿಪಡಿಸಲಾಗಿದೆ. ಚಲನ್ ಮುದ್ರಿಸಿಕೊಂಡು ಬ್ಯಾಂಕ್ ಗೆ ಶುಲ್ಕ ಜಮೆ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
GOOD NEWS : ಕೃಷಿ ಜಮೀನಲ್ಲಿ ಮನೆ ಕಟ್ಟಲು ಏಳೇ ದಿನಗಳಲ್ಲಿ ಅನುಮತಿ : ‘ಭೂಕಂದಾಯ ತಿದ್ದುಪಡಿ ಮಸೂದೆ’ ಮಂಡನೆ