ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಕೋವಿಡ್ ಕಂಟ್ರೋಲ್ ಸಂಬಂಧ ಮಹತ್ವದ ಸಭೆ ನಡೆಸಲಾಯಿತ್ತು. ಈ ಸಭೆಯಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಪ್ರಕಟಿಸೋ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ಬೆನ್ನಲ್ಲೇ, ಇದೀಗ ಆರೋಗ್ಯ ಇಲಾಖೆಯಿಂದ ಕೋವಿಡ್ ನಿಯಂತ್ರಣ ಕ್ರಮವನ್ನು ಜಾರಿಗೊಳಿಸಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಕೋವಿಡ್-19 ಪರಿಸ್ಥಿತಿಯ ಹಿನ್ನಲೆಯಲ್ಲಿ ಪಾಲಿಸಬೇಕಾದ ಶಿಷ್ಠಾಚಾರ ಕ್ರಮಗಳನ್ನು ಪ್ರಕಟಿಸಲಾಗಿದೆ. ಅದರಂತೆ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಎಲ್ಲಾ ಐಎಲ್ಐ, ಸಾರಿ ಪ್ರಕರಣಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಇನ್ನೂ ಕೋವಿಡ್ ಲಕ್ಷಣ ಹೊಂದಿದವರಿಗೆ ಹಾಗೂ ಖಚಿತ ಪ್ರಕರಣಗಳ ಸಂಪರ್ಕಿತರು ಕೋವಿಡ್ ಪರೀಕ್ಷೆಗೆ ಒಳಪಡುವುದನ್ನು ಖಚಿತಪಡಿಸಿಕೊಳ್ಳಬೇಕು. ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಪರೀಕ್ಷೆ ಒಳಪಡಿಸಲು ಅಗತ್ಯ ಸಂಖ್ಯೆಯ ಟೀಂಗಳನ್ನು ಬಿಬಿಎಂಪಿ ಹಾಗೂ ಜಿಲ್ಲೆಗಳು ಕಾರ್ಯೋನ್ಮುಖಗೊಳಿಸುವಂತೆ ತಿಳಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ, ಅಂತರ ರಾಷ್ಟ್ರೀಯ ಪ್ರಯಾಣಿಕರ ಪೈಕಿ ಶೇ.2ರನ್ನು ಯಾದೃಚ್ಛಿಕವಾಗಿ ಕೋವಿಡ್ ಪರೀಕ್ಷೆಗೆ ಈಗಾಗಲೇ ಒಳಪಡಿಸಲಾಗುತ್ತಿದ್ದು, ಹಾಗೆಯೇ ಮುಂದುವರೆಸುವಂತೆ ಸೂಚಿಸಿದೆ. ಜೊತೆಗೆ ಭಾರತ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಹೇಳಿದೆ.
ಎಲ್ಲಾ ಕೋವಿಡ್-19 ಪಾಸಿಟಿವ್ ಫಲಿತಾಂಶ ಬಂದ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಡ್ಡಾಯವಾಗಿ ಕಳುಹಿಸಬೇಕು. ಕೋವಿಡ್ ಹೆಚ್ಚಳದ ಕಾರಣ ಎಲ್ಲಾ ಹಂತಗಳಲ್ಲೂ ಲಸಿಕಾಕರಣದ ಕ್ಯಾಂಪ್ ಗಳನ್ನು ಆಯೋಜಿಸುವಂತೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಕನಿಷ್ಠ ಸಂಖ್ಯೆಯ ಐಸೋಲೇಷನ್ ಬೆಡ್ ಗಳನ್ನು ಮೀಸಲಿಡುವುದು. ಇದೇ ಮಾದರಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸನ್ನದ್ಧವಾಗಿರಿಸುವುದು. ಆಕ್ಸಿಜನ್, ಔಷಧಿ ಹಾಗೂ ಬೆಡ್, ಇತ್ಯಾದಿಗಳ ಕುರಿತು ಮಾಹಿತಿ ಪಡೆದು ಸಿದ್ಧವಾಗಿರಿಸುವುದು ಎಂದು ಹೇಳಿದೆ.
ಇನ್ನೂ ಸಾರ್ವಜನಿಕರು ಹಾಗೂ ಸಭೆ, ಸಮಾರಂಭಗಳ ಆಯೋಜಕರಿಗೂ ಕೋವಿಡ್ ನಿಯಂತ್ರಣ ಸಲಹೆಯನ್ನು ಮಾಡಿರುವಂತ ಆರೋಗ್ಯ ಇಲಾಖೆಯು, ಮುಚ್ಚಿದ ಸಂರಕ್ಷಣೆಗಳಾದ ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್, ಶಾಪಿಂಗ್ ಮಾಲ್, ಕಚೇರಿ ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಾಗಿರುತ್ತದೆ. ಮಾಸ್ಕ್ ಧರಿಸುವಂತೆ ಸೂಚಿಸಿದೆ.
ಅರ್ಹರೆಲ್ಲರೂ ಕೋವಿಡ್ ಲಸಿಕೆಯ ಫ್ರಿಕಾಶನರಿ ಡೋಸ್ ಶೀಘ್ರವಾಗಿ ಪಡೆದುಕೊಳ್ಳಬೇಕು. ಉಸಿರಾಟ ಸಮಸ್ಯೆ ಇರೋರು, ಕೋವಿಡ್ ಸೋಂಕಿನ ಲಕ್ಷಣ ಹೊಂದಿರೋರು, ಸ್ವಯಂ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ಮಾಡಿದೆ.
ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದ್ದಲ್ಲದೇ, ದೈಹಿಕ ಅಂತರವನ್ನು ಪಾಲಿಸುವಂತೆ ತಿಳಿಸಿದೆ. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಹೇಳಿದೆ.
ವರದಿ: ವಸಂತ ಬಿ ಈಶ್ವರಗೆರೆ
BIGG NEWS : ‘ಅಧಿಕ ಬಡ್ಡಿ’ ವಸೂಲಿ ಮಾಡುವವರ ವಿರುದ್ಧ ದಾಳಿ ನಡೆಸುವ ಅಧಿಕಾರ ಪೊಲೀಸರಿಗಿಲ್ಲ: ಹೈಕೋರ್ಟ್ ಆದೇಶ