ಪಶ್ಚಿಮ ಬಂಗಾಳ : ವಿದೇಶಗಳಲ್ಲಿ ಕೋವಿಡ್ ಕೇಸ್ ಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕೇಂದ್ರ ಆರೋಗ್ಯ ಸಚಿವಾಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯಗಳಿಗೂ ಕೋವಿಡ್ ಕ್ರಮ ಅನುಸರಿಸುವಂತೆ ಸೂಚಿಸಿದೆ. ಆದರೆ ಬಂಗಾಯದಲ್ಲಿ ಮುಂಬರುವ ಕ್ರಿಸ್ಮಸ್ ಆಚರಣೆಗಳು ಮತ್ತು ಗಂಗಾಸಾಗರ ಮೇಳದ ಸಮಯದಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಮಾರ್ಚ್ 2020 ರಲ್ಲಿ ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕ ಕೋವಿಡ್ ರಾಜ್ಯದಲ್ಲಿ ಸಂಭವಿಸಿದ್ರೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ಇವೆಲ್ಲದರ ಮೇಲೆ ನಿಗಾ ಇಡುತ್ತಿದ್ದೇವೆ. ಎಲ್ಲವನ್ನೂ ನೋಡಿಕೊಳ್ಳಲು ನಾವು ಸಮಿತಿಯನ್ನು ಸಹ ರಚಿಸಿದ್ದೇವೆ ಎಂದು ಹೇಳಿದ್ದಾರೆ.
ಭಾರತದ ವಿವಿಧ ಭಾಗಗಳಿಂದ ಲಕ್ಷಾಂತರ ಯಾತ್ರಾರ್ಥಿಗಳನ್ನು ಆಕರ್ಷಿಸುವ ವಾರ್ಷಿಕ ಗಂಗಾಸಾಗರ ಮೇಳ (ಜಾತ್ರೆ) 2020 ಮತ್ತು 2021 ರಂತೆ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಜನವರಿಯಲ್ಲಿ ನಡೆಯಲಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ವೈರಸ್ನ ಹೊಸ ರೂಪಾಂತರವಾದ ಓಮಿಕ್ರಾನ್ ಬಿಎಫ್.7 ರ ದೇಶದಲ್ಲಿ ಪತ್ತೆಯಾದ ವಿಚಾರ ಹಾಗೂ ಕೋವಿಡ್ -19 ಪರಿಸ್ಥಿತಿಯನ್ನು ತಾನು ಮತ್ತು ಬೋಸ್ ಚರ್ಚಿಸಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಹೊಸ ರೂಪಾಂತರವು ಈಗಾಗಲೇ ಎರಡು ರಾಜ್ಯಗಳಲ್ಲಿ ಪತ್ತೆಯಾಗಿರುವುದರಿಂದ, ಬಂಗಾಳವನ್ನು ತಲುಪಲು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಇದೇ ವೇಳಿ ಚೀನಾದಲ್ಲಿ ಏಕಾಏಕಿ ಏರಿಕೆಯಾಗುತ್ತಿರುವ ಕೋವಿಡ್ ಪರಿಸ್ಥಿತಿ ಕುರಿತಂತೆ ಬೇಸರ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.
‘ಸಾಮಾಜಿಕ ಜಾಲತಾಣ’ಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಸುದ್ದಿ ಹಾಕೋ ಮುನ್ನ ಎಚ್ಚರ.! ಯಾಕೆ ಅಂತ ಈ ಸುದ್ದಿ ಓದಿ
BIG BREAKING NEWS: ರಾಜ್ಯ ಸರ್ಕಾರದಿಂದ ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ