ನವದೆಹಲಿ : ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಧ್ವನಿ ಮಾದರಿಯನ್ನು ಪಡೆಯಲು ಅನುಮತಿ ಕೋರಿ ದೆಹಲಿ ಪೊಲೀಸರು ಗುರುವಾರ ನಗರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪೊಲೀಸರ ಅರ್ಜಿ ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಆರೋಪಿ ಪೂನಾವಾಲಾನ 14 ದಿನಗಳ ನ್ಯಾಯಾಂಗ ಬಂಧನವು ನಾಳೆ ( ಶುಕ್ರವಾರ) ಮುಕ್ತಾಯಗೊಳ್ಳಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ಗುರುವಾರ ತನ್ನ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡಿದ್ದು, ಈ ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿತ್ತು ಎಂದು ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.
ಾರೋಪಿ ಅಫ್ತಾಬ್, ತನ್ನ ಸ್ನೇಹಿತೆ ಶ್ರದ್ಧಾಳನ್ನು ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಮೇ ತಿಂಗಳಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದಿದ್ದನು.
‘ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬರುವಂತೆ ಮಾಡುತ್ತೇನೆ’ : H.D ಕುಮಾರಸ್ವಾಮಿ