ಚೀನಾ : ನೆರೆಯ ದೇಶದ ಚೀನಾದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿವೆ. ಇದರ ಬೆನ್ನಲ್ಲೆ ಹೊಸ ವಿಶ್ಲೇಷಣೆಯೊಂದು ಹೊರ ಬಿದ್ದಿದೆ. ಅದರ ಪ್ರಕಾರ ಚೀನಾದಲ್ಲಿ ಪ್ರತಿದಿನ 1 ಮಿಲಿಯನ್ ಕೋವಿಡ್ ಸೋಂಕುಗಳು ಮತ್ತು 5 ಸಾವಿರಕ್ಕೂ ಕೋವಿಡ್ ಸಾವುಗಳು ಸಂಭವಿಸಲಿವೆ ಎಂದು ವರದಿ ಮಾಡಿದೆ.
ಸುಮಾರು 1.4 ಬಿಲಿಯನ್ ಜನರಿರುವ ಚೀನಾದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಜನವರಿಯಲ್ಲಿ ದೈನಂದಿನ ಪ್ರಕರಣದ ದರವು 3.7 ಮಿಲಿಯನ್ಗೆ ಏರಿಕೆಯಾಗಬಹುದು ಎಂದು ಲಂಡನ್ ಮೂಲದ ಸಂಶೋಧನಾ ಸಂಸ್ಥೆಯಾದ ಏರ್ಫಿನಿಟಿ ಲಿಮಿಟೆಡ್ ಹೇಳಿದೆ.
ಇದು ಮುನ್ಸೂಚಕ ಆರೋಗ್ಯ ವಿಶ್ಲೇಷಣೆ ಮತ್ತು ಸಾಂಕ್ರಾಮಿಕ ರೋಗ ಆರಂಬವಾದಗಿನಿಂದ ಟ್ರ್ಯಾಕ್ ಮಾಡುತ್ತಿದೆ. ಮಾರ್ಚ್ನಲ್ಲಿ ದೈನಂದಿನ ಗರಿಷ್ಠ 4.2 ಮಿಲಿಯನ್ ಸೋಂಕು ಪತ್ತೆಯಾಗಲಿದ್ದು, ಮತ್ತೊಂದು ಉಲ್ಬಣವು ಕಂಡುಬರಬಹುದು ಎಂದು ಗುಂಪು ಅಂದಾಜಿಸಿದೆ.
ಚೀನಾ ಬುಧವಾರ 2,966 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಡಿಸೆಂಬರ್ ಆರಂಭದಿಂದ 10 ಕ್ಕಿಂತ ಕಡಿಮೆ ಕೋವಿಡ್ ಸಾವುಗಳು ಸಂಭವಿಸಿವೆ. ಎಂದು ಹೇಳುತ್ತಿದೆ. ಆದರೆ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಸ್ಮಶಾನಗಳನ್ನು ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ತಳ್ಳಲಾಗುತ್ತಿದೆ ಎಂಬ ವರದಿಗಳ ಬರುತ್ತಿವೆ. ಇವೆರಡ ನಡುವೆ ವ್ಯತಿರಿಕ್ತ ವ್ಯತ್ಯಾಸ ಕಂಡು ಬರುತ್ತಿದೆ.
ಶೂನ್ಯ ಕೋವಿಡ್ ನಿಯಮಗಳನ್ನು ಕೊನೆಗೊಳಿಸದ ಬಳಿಕ ಚೀನಾದಲ್ಲಿ ಏಕಾಏಕಿ ಕೋವಿಡ್ ಕೇಸ್ ಗಳು ದಾಖಲಾಗುತ್ತಿವೆ. ಇತ್ತ ಚೀನಾ ಕೋವಿಡ್ ಪರೀಕ್ಷಯನ್ನು ರದ್ದಗೊಳಿಸಿದಂತೆ ಕಾಣುತ್ತಿದೆ. ಇದಲ್ಲದೆ ಕೋವಿಡ್ ಕುರಿತಂತೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಿಲ್ಲ.
BIGG NEWS : ಹಲವು ಷರತ್ತುಗಳೊಂದಿಗೆ ಪೊಲೀಸ್ ಸಿಬ್ಬಂದಿಯ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ
ನೂತನ ಸ್ಟಾರ್ಟಪ್ ನೀತಿಗೆ ಸಂಪುಟ ಅಸ್ತು: 5 ವರ್ಷಗಳಲ್ಲಿ 10 ಸಾವಿರ ಕಂಪನಿಗಳ ಸ್ಥಾಪನೆ ಗುರಿ