ಬೆಂಗಳೂರು : ಪೊಲೀಸ್ ಸಿಬ್ಬಂದಿಯ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ, ಇತರೆ ಜಿಲ್ಲೆಗಳು ಅಥವಾ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೊಂದಲು ಅರ್ಹತೆ ಹೊಂದಿರುತ್ತಾರೆ.ಪೊಲೀಸ್ ಇಲಾಖೆಗೆ ನೇಮಕವಾದ ಹಾಗೂ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ಮಾಜಿ ಯೋಧರು ಸಹ ಬೇರೆ ಜಿಲ್ಲೆಗೆ ವರ್ಗಾವಣೆ ಕೋರಲೂ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕಿದೆ.ಮಾಜಿ ಯೋಧರು ಸಹ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಆಗಬಹುದು ಎಂದು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
BIGG NEWS: ಚೀನಾದಲ್ಲಿ ದಿನಕ್ಕೆ 1 ಮಿಲಿಯನ್ ಕೋವಿಡ್ ಕೇಸ್, 5 ಸಾವಿರ ಸಾವುಗಳು ಸಂಭವಿಸಬಹುದು : ವರದಿ | China Covid
ಸಿಎಂ ಬೊಮ್ಮಾಯಿಯಿಂದ ‘ಚಿಕ್ಕಮಗಳೂರು ಜಿಲ್ಲಾ ಉತ್ಸವ 2023’ ರ ಲಾಂಛನ ಬಿಡುಗಡೆ
2019 ರಲ್ಲಿ ಸೇವಾಮಿತಿ ಏರಿಕೆ ವರ್ಗಾವಣೆಗೆ ಕನಿಷ್ಟ 3 ವರ್ಷಗಳ ಸೇವಾವಧಿ ಮಿತಿ ನಿಗದಿಗೊಳಿಸಲಾಗಿತ್ತು. ಪೊಲೀಸ್ ಸೇವೆ ಸಲ್ಲಿಸುತ್ತಿರುವವರು ಕಡ್ಡಾಯವಾಗಿ 7 ವರ್ಷ ಸೇವೆ ಪೂರೈಸಿದ್ದರಷ್ಟೇ ಕೋರಿಕೆ ಮೇರೆಗೆ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸಬೇಕು ಎಂಬ ಆದೇಶ ಹೊರಡಿಸಲಾಗಿತ್ತು.
ಮಂಗಳೂರು ವಿವಿ ಫಲಿತಾಂಶ ಹತ್ತು ದಿನದೊಳಗಾಗಿ ಪ್ರಕಟ – ಸಚಿವ ಅಶ್ವತ್ಥನಾರಾಯಣ
ನೂತನ ಸ್ಟಾರ್ಟಪ್ ನೀತಿಗೆ ಸಂಪುಟ ಅಸ್ತು: 5 ವರ್ಷಗಳಲ್ಲಿ 10 ಸಾವಿರ ಕಂಪನಿಗಳ ಸ್ಥಾಪನೆ ಗುರಿ