ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಆತಂಕ ಶುರುವಾಗಿದ್ದು, ಸರ್ಕಾರದಿಂದ ಮತ್ತೆ ಬಿಗಿ ನಿಯಮ ಜಾರಿಯಾಗುತ್ತದೆ ಎನ್ನಲಾಗಿದೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಹೆಚ್ಚಳ ಭೀತಿ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡ್ಡಿಪಡಿಸದಂತೆ ಹೋಟೆಲ್ ಅಸೋಸಿಯೇಷನ್ ನಿಂದ ಮನವಿ ಮಾಡಿದೆ.
ಕಳೆದ 2 ವರ್ಷದಲ್ಲಿ ಕೊರೊನಾ ಹಿನ್ನೆಲೆ ಹೊಸ ವರ್ಷದ ಆಚರಣೆ ಮಾಡಿಲ್ಲ. ಹೀಗಾಗಿ ಉದ್ಯಮಕ್ಕೆ ಭಾರೀ ನಷ್ಟ ಆಗಿತ್ತು. ಈಗ ಮತ್ತೆ ನೆರೆ ರಾಷ್ಟ್ರದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನಲೆ ನಮ್ಮ ರಾಜ್ಯದಲ್ಲೂ ಕೆಲ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧಾರ ಮಾಡುತ್ತಿದೆ, ಇದರಿಂದ ಮತ್ತೆ ನಮ್ಮ ಉದ್ಯಮಕ್ಕೆ ಹೊಡೆತ ಬೀಳಲಿದೆ. ಸರ್ಕಾರ ಇಂತಹ ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೋಟೆಲ್ ಸಂಘದ ಜೊತೆ ಸಭೆ ನಡೆಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸೂಚನೆ ನೀಡಿದ್ದಾರೆ. ಸುವರ್ಣಸೌಧದಲ್ಲಿ ಸಿಎಂ ಬೊಮ್ಮಾಯಿ ಜೊತೆ ಕೋವಿಡ್ ಸಭೆ ನಡೆಸಿದ ಬಳಿಕ ಸಚಿವ ಸುಧಾಕರ್ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ.ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಜೆಯೊಳಗೆ ಮಾರ್ಗಸೂಚಿ ಪ್ರಕಟ ಮಾಡಲಿದೆ, ಸದ್ಯ ಏರ್ ಪೋರ್ಟ್ ನಲ್ಲಿ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಲಸಿಕೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಮಾಧ್ಯಮಗಳು ಜನರಿಗೆ ಆತಂಕ ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಗಾಗಿ ಹಾಸಿಗೆ ಮೀಸಲಿಡಲಿದ್ದೇವೆ, ಆಕ್ಸಿಜನ್ ಪಾಲೌಟ್ ಮಾಡಲು ಕೂಡ ನಿರ್ಧರಿಸಲಾಗಿದೆ ಎಂದು ಹೇಳಿದರು. ಇನ್ನೂ ಇಂದು ಸಂಜೆಯೊಳಗೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ ಆಗಲಿದೆ ಎನ್ನಲಾಗಿದೆ.
BREAKING NEWS: ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಮತ್ತೆ 10 ದಿನ ಗಡುವು ಕೇಳಿರುವ ಸಿಎಂ ಬೊಮ್ಮಾಯಿ
BREAKING NEWS : ಒಳಾಂಗಣ ಪ್ರದೇಶದಲ್ಲಿ ‘ಮಾಸ್ಕ್’ ಕಡ್ಡಾಯ : ಕೆಲವೇ ಕ್ಷಣದಲ್ಲಿ ಮಾರ್ಗಸೂಚಿ ಪ್ರಕಟ