ಬೆಳಗಾವಿ : ಬಿಜೆಪಿ ಶಾಸಕ ಸಿ.ಟಿ. ರವಿ ಸದನಕ್ಕೆ ಬರುವಾಗ ಹೆಂಡ ಕುಡಿದು ಬರ್ತಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಮಾಧ್ಯಮದ ಮುಂದೆ ಬರುವಾಗ ಕುಡಿದು ಬರ್ತಾರೆ, ಸದನಕ್ಕೆ ಎಕ್ಸಾಟ್ರ ಪಂಚ್ ಕೊಡಬೇಕೆಂದು ಗಾಂಜಾ ಸೇದಿ ಬರ್ತಾರೆ. ಗುಜರಾತ್ ನಲ್ಲಿ ಉಚಿತ ಗಾಂಜಾ ಸಿಗುತ್ತೆಂದು ಸೇದಿಕೊಂಡು ಬರ್ತಾರೆ.ಕುಡುಕರು, ಕೊಲೆ ಮಾಡಿದವರಿಗೆ ಕಲವೊಂದು ಸಲ ಕ್ಷಮಾಪಣೆ ಸಿಗುತ್ತದೆ. ಗಾಂಜಾ ಸೇದಿಕೊಂಡು ಬಂದ್ರೆ ವ್ಯಸನಿ ಅಂತಾರೆ ಎಂದರು.
ರವಿ ಸದನಕ್ಕೆ ಬರುವಾಗ ಹೆಂಡ ಕುಡಿದೇ ಬರುತ್ತಾರೆ ಮತ್ತು ಸದನದಲ್ಲಿ ಮಾತಾಡುವಾಗ ಹೆಚ್ಚುವರಿ ಪಂಚ್ ಗಾಗಿ ಗಾಂಜಾ ಸೇವಿಸುತ್ತಾರೆ. ಅವರೊಬ್ಬ ಮಾದಕ ವ್ಯಸನಿ ಅನ್ನೋ ಕಾರಣಕ್ಕೆ ನಾವು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.